ಉತ್ತರೆ ಬೆಟ್ಟದ ಸಾಲುಗಳಿಗೆ ಬೆಂಕಿ ಬಿದ್ದರೆ ಸೆಟಲೈಟ್ ಮೂಲಕ ಮಾಹಿತಿ ರವಾನೆ

News Desk

ಉತ್ತರೆ ಬೆಟ್ಟದ ಸಾಲುಗಳಿಗೆ ಬೆಂಕಿ ಬಿದ್ದರೆ ಸೆಟಲೈಟ್ ಮೂಲಕ ಮಾಹಿತಿ ರವಾನೆ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತೀಯ ಕಿಸಾನ್ ಸಂಘವು ಅರಣ್ಯ ಇಲಾಖೆಗೆ ಭೇಟಿಕೊಟ್ಟು ವಲಯ ಅರಣ್ಯ ಅಧಿಕಾರಿಗೆ ಶಶಿಧರ್ ಅವರಿಗೆ ಮನವಿ ಸಲ್ಲಿಸಿತು.

ಉತ್ತಾರೆ ಬೆಟ್ಟಸಾಲು ಗಳಲ್ಲಿ ಎರಡು ಡ್ಯಾಂ ಗಳು ಬೋರನ ಕಣಿವೆ ಹಾಗೂ ವಾಣಿವಿಲಾಸಾಗರ, ಧಾರ್ಮಿಕ ಸ್ಥಳಗಳಾದ ದಶರಥ ರಾಮೇಶ್ವರ ವಜ್ರ ಹಾಗೂ ಸಿದ್ದಪ್ಪನ ವಜ್ರ, ಅಮೂಲ್ಯವಾದ ರಕ್ತ ಚಂದನ ಮುಂತಾದ ಸಸ್ಯಗಳು ಗಿಡಮರಗಳು ಇವೆ. ಹಾಗೂ ಅಪರೂಪದ ಕಾಡು ಪ್ರಾಣಿಗಳಾದ ಜಿಂಕೆ, ಕರಡಿ, ಚಿರತೆ ಮುಂತಾದ ಪ್ರಾಣಿಗಳಿವೆ. ಜೊತೆಗೆ ಜಿಂಕೆ ಜಾತಿಗೆ ಸೇರಿದ ಉತ್ತರೆ ಎಂಬ ವಿಶೇಷ ಪ್ರಾಣಿ ಇದೆ. ಹಾಗಾಗಿ ಉತ್ತರೆ ಬೆಟ್ಟಕ್ಕೆ ಈ ಹೆಸರು ಬಂತು.

ಹಾಗಾಗಿ ಉತ್ತರೆ ಬೆಟ್ಟಕ್ಕೆ ಬೆಂಕಿ ಬಿದ್ದರೆ ಉತ್ತರ ಮಳೆ ಬಂದರೆ ಹಾರುವುದು ಎನ್ನುವ ಪ್ರತಿತಿ ಇದೆ. ಪ್ರತಿ ವರ್ಷವೂ ನಾವು ಚಿಕ್ಕಂದಿನಿಂದ ನೋಡುತ್ತಾ ಬಂದಂತೆ ಉತ್ತರೆ ಬೆಟ್ಟದ ಸಾಲುಗಳಿಗೆ ಕಾಡು ಕಿಚ್ಚು ಹಬ್ಬುವುದು ನೋಡಿದ್ದೇವೆ.
ಆ ಬೆಟ್ಟಸಾಲುಗಳಿಗೆ ಬೆಂಕಿ ಬಿದ್ದರೆ ಅಕ್ಕಪಕ್ಕದ 15 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎರಡರಿಂದ ಮೂರು ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ಹೆಚ್ಚಳವಾಗುವುದು ಹಾಗೂ ಉಷ್ಣಾಂಶ ಹೆಚ್ಚಳದಿಂದ ತೆಂಗು ಅಡಿಕೆ ಮುಂತಾದ ಬೆಳೆಗಳು ಇಳುವರಿ ಕುಂಟಿತ ಆಗುವುದು ಕಂಡು ಬಂದಿದೆ.

ಹಾಗಾಗಿ ತಾವುಗಳು ಇನ್ನೇನು ಬೇಸಿಗೆ ಕಾಲ ಬರುವ ಮುನ್ನವೇ ಎಚ್ಚೆತ್ತುಕೊಂಡು ಬೆಂಕಿ ನಂದಿಸಲು ವಿಶೇಷವಾದ ಕರ್ತವ್ಯ ನಿರ್ವಹಿಸಬೇಕು. ಹಾಗೂ ಆ ಭಾಗದ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕು ಎಂದು ಮನವಿ ಸಲ್ಲಿಸಲಾಯಿತು.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ವಲಯ ಅರಣ್ಯಾಧಿಕಾರಿ ಶಶಿಧರ್ ರವರು ಉತ್ತರೆ ಬೆಟ್ಟದ ಸಾಲುಗಳಲ್ಲಿ ಎಲ್ಲಾದರೂ ಬೆಂಕಿ ಬಿದ್ದರೆ ನಮಗೆ ಸೆಟಲೈಟ್ ಮೂಲಕ ಅಲಾರಾಂ ಬರುತ್ತದೆ ಹಾಗಾಗಿ ನಾವು ವಿಶೇಷವಾಗಿ ಬೆಂಕಿ ನಂದಿಸುವ ಕೆಲಸವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ ಆ ಭಾಗದ ಜನರು ಕಾಡಿಗೆ ಅಥವಾ ಬೆಟ್ಟ ಸಾಲುಗಳಿಗೆ ಬೆಂಕಿ ಹಚ್ಚಬಾರದು ಎಂದು ಜನರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಗಡಾರಿ ಕೃಷ್ಣಪ್ಪ, ಮಂಜುನಾಥ್ ಕಾತ್ರಿಕೇನಹಳ್ಳಿ, ಚಂದ್ರಗಿರಿ ದಿಂಡಾವರ, ಜಯಪ್ರಕಾಶ್ ಕೆ ಕೆ ಹಟ್ಟಿ, ಜಯಣ್ಣ, ರಂಗನಾಥ್ ಗೌಡ, ಯು ವಿ ಗೌಡ ದೊಡ್ಡಘಟ್ಟ, ಕುಮಾರಣ್ಣ ಮುಂತಾದವರು ಇದ್ದರು.

- Advertisement -  - Advertisement - 
Share This Article
error: Content is protected !!
";