ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ನೂತನ ಪ್ರಾಧಿಕಾರ ರಚನೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ನೂತನವಾಗಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿದ್ದು
, ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧಿಕಾರೇತರ ಸದಸ್ಯರನ್ನಾಗಿ ಗಂಟಿಗಾನಹಳ್ಳಿ ರಂಗಪ್ಪ, ರವಿ.ಕೆ.ಎಸ್, ಆರ್. ವಿ. ಮಹೇಶ್ ಕುಮಾರ್, ಲಕ್ಷ್ಮನಾಯಕ್, ಎಂ. ಹೇಮಲತಾ ರವರನ್ನು ಸರ್ಕಾರ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.

         ನೂತನವಾಗಿ ನಾಮ ನಿರ್ದೇಶನ ಗೊಂಡಿರುವ ಸದಸ್ಯರನ್ನು ಮುಜರಾಯಿ ಸಚಿವ ರಾಮಲಿಂಗರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಹೆಚ್. ಮುನಿಯಪ್ಪ, ಕೆಪಿಸಿಸಿ ಉಪಾಧ್ಯಕ್ಷ ವೆಂಕಟರಮಣಯ್ಯ, ಡಿ. ಪಿ. ಎ. ಅಧ್ಯಕ್ಷರಾದ ಚುಂಚೆಗೌಡ, ನಿರ್ದೇಶಕ ವೆಂಕಟೇಶ್, ರಾಜಘಟ್ಟ ನಾರಾಯಣ ಸ್ವಾಮಿ, ದೇವಾಲಯದ ಪ್ರದಾನ ಅರ್ಚಕರಾದ ಸುಬ್ರಮಣ್ಯ, ಸೋಮನಾಥ್, ನಗರಸಭಾ ಸದಸ್ಯ ಕಾಂತರಾಜ್, ಮುತ್ತಣ್ಣ, ದೇವಾಲಯದ ಸಿಬ್ಬಂದಿ ನಂಜಪ್ಪ ಸೇರಿದಂತೆ ಹಲವಾರು ಮುಖಂಡರು ಅಭಿನಂದಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";