ಕೆಪಿಎಸ್ ಸಿ ಮರು ಪರೀಕ್ಷೆಯಲ್ಲೂ ಎಡವಟ್ಟು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಎಎಸ್‌ ಪರೀಕ್ಷೆ ಮುಂದೂಡಿ ಎಂದು ಅಭ್ಯರ್ಥಿಗಳು ತಿಂಗಳುಗಳ ಕಾಲ ಹೋರಾಟ ನಡೆಸಿದಾಗ ಭಂಡತನಕ್ಕೆ ಬಿದ್ದು ಪರೀಕ್ಷೆ ನಡೆಸಿದ ಸರ್ಕಾರ, ಬಳಿಕ ಆಕ್ರಮದ ಬಂಡವಾಳ, ಅನುವಾದದ ಲೋಪ ಬಯಲಾದಾಗ ಮರುಪರೀಕ್ಷೆ ನಡೆಸಿ ಅದರಲ್ಲೂ  ಅದೇ ಎಡವಟ್ಟು ಮಾಡಿದೆ ಭಂಡ ಸರ್ಕಾರ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಸಂಧಿ-ಸಮಾಸ, ವ್ಯಾಕರಣದ ಕುರಿತು ಭಾಷಣ ಬಿಗಿಯುವ ಸಿಎಂ ಸಿದ್ದರಾಮಯ್ಯ ಅವರೇ, ಈ ಬಾರಿಯ ಕೆಎಎಸ್ ಮರುಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ 50% ದೋಷ ಕಂಡು ಬಂದಿದೆ. ಕನ್ನಡ ನಾಡಿನಲ್ಲಿ, ಕನ್ನಡಿಗರ ಸೇವೆ ಮಾಡುವ ಅಧಿಕಾರಿಗಳ ನೇಮಕಕ್ಕೆ ಪ್ರಶ್ನೆಪತ್ರಿಕೆಗಳನ್ನು ಇಂಗ್ಲಿಷಿನಲ್ಲಿ ಸಿದ್ದಪಡಿಸಿ ನಂತರ ಕನ್ನಡಕ್ಕೆ ಅನುವಾದ ಮಾಡುವ ಅಗತ್ಯವಾದರೂ ಏನಿತ್ತು ? ಎಂದು ಬಿಜೆಪಿ ಪ್ರಶ್ನಿಸಿದೆ.

 ಸಾವಿರಾರೂ ಕನಸುಗಳನ್ನು ಕಟ್ಟಿಕೊಂಡು, ಹಲವು ವರ್ಷಗಳ ಕಾಲ ಶ್ರಮಪಟ್ಟು ಪರೀಕ್ಷೆ ಬರೆದಿರುವ ಅಕಾಂಕ್ಷಿಗಳಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ‌ ನಡೆಸಿರುವ ಸರಣಿ ಮೋಸವನ್ನು ಕ್ಷಮಿಸಲು ಸಾಧ್ಯವಿಲ್ಲ. ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಸರ್ಕಾರ ನ್ಯಾಯ ಒದಗಿಸಬೇಕೆಂದು ಬಿಜೆಪಿ ಆಗ್ರಹಿಸಿದೆ‌.

 

 

 

- Advertisement -  - Advertisement - 
Share This Article
error: Content is protected !!
";