ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಮುಹೂರ್ತ ಫಿಕ್ಸ್‌

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂಡಿಯಾಎಂಬ ಹೆಸರಿನಲ್ಲಿ ಕಾಂಗ್ರೆಸ್‌ ರಚಿಸಿದ್ದ ಮೈತ್ರಿಕೂಟದಿಂದ ಇದೀಗ ಕಾಂಗ್ರೆಸ್‌ ಪಕ್ಷವನ್ನೇ ಹೊರಹಾಕಲಾಗಿದೆ. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಕಟ್ಟಿದ ಗೂಡಿನಿಂದ ಭಾರತೀಯ ಕಾಂಗ್ರೆಸ್ ಪಕ್ಷವೇ ಹೊರಬಿದ್ದಿದೆ.

ದೆಹಲಿ ಅಸೆಂಬ್ಲಿ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಅಕ್ಷರಶಃ ಅಂತಿಮಯಾತ್ರೆ ಎಂಬಂತಾಗಿದೆ. ಕಾಂಗ್ರೆಸ್‌ ಸಹವರ್ತಿ ಪಕ್ಷಗಳು ಸೇರಿಕೊಂಡು ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಮುಹೂರ್ತ ಫಿಕ್ಸ್‌ ಮಾಡಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

 ಇಂಡಿ ಕೂಟದೊಳಗಿನ ಕಲಹವನ್ನು ಉಲ್ಲೇಖಿಸಿ ಒಕ್ಕೂಟದ ಪ್ರಮುಖ ನಾಯಕ ಜಮ್ಮು & ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ ಅವರು ಇಂಡಿ ಒಕ್ಕೂಟವನ್ನೇ ಬರ್ಖಾಸ್ತು ಮಾಡಲು ಸಲಹೆ ನೀಡಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿನ ನಾಯಕತ್ವವನ್ನೇ ಇಂಡಿ ಒಕ್ಕೂಟದ ಮಿತ್ರ ಪಕ್ಷಗಳು ಟೀಕಿಸುತ್ತಿವೆ ಎಂದು ಹೇಳಿದ್ದಾರೆ.

ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಏಕಾಂಗಿಯಾಗಿರುವುದು ಕಾಂಗ್ರೆಸ್ ವಿರುದ್ಧ ದೇಶದಾದ್ಯಂತ ಎದ್ದಿರುವ ಆಕ್ರೋಶದ ಅಲೆಗಳಿಗೆ ಸಾಕ್ಷಿಯಾಗಿದೆ.  ಕಾಂಗ್ರೆಸ್‌ ಚಿಂತನೆಗಳು ಈ ದೇಶಕ್ಕೆ ಮಾರಕ ಎಂಬುದನ್ನು ಕಾಂಗ್ರೆಸ್‌ ಸಹವರ್ತಿಗಳೇ ಅರಿತುಕೊಂಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

 

- Advertisement -  - Advertisement - 
Share This Article
error: Content is protected !!
";