ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಚನ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ನಾಲ್ಕನೇ ದಿನವೂ ಉಗ್ರವಾಗಿ ಹೋರಾಟ ಮಾಡುತ್ತಿದ್ದಾರೆ ಬಿಜೆಪಿ ತಿಳಿಸಿದೆ.
ರಾಜ್ಯದಲ್ಲಿ ಮಹಿಳೆಯರ ಪರ ನಿಂತುಕೊಳ್ಳಬೇಕಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಫ್ರಸ್ಟ್ರೇಷನ್ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ, ಎಲ್ಲಿ ನಾಪತ್ತೆ ಆಗಿದ್ದೀರಿ? ಸುಮಾರು 20 ಸಾವಿರ ಆಶಾ ಕಾರ್ಯಕರ್ತೆಯರು ರಸ್ತೆ ಬದಿಯಲ್ಲಿ ಮೈಕೊರೆಯುವ ಚಳಿಯಲ್ಲಿ ಮಲಗಿ ಉಗ್ರ ಹೋರಾಟ ಮಾಡುತ್ತಿದ್ದರೂ ನಿಮ್ಮ ಕರುಳು ಚೂರ್ ಎನ್ನುತ್ತಿಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಮಿಸ್ಟರ್ ಸಿದ್ದರಾಮಯ್ಯ ಅವರೇ, ನಕ್ಸಲರನ್ನು ಗೃಹ ಕಚೇರಿಗೆ ಕರೆಸಿ ಭೇಟಿ ಆಗುವುದಕ್ಕೆ ಸಮಯವಿದೆ. ಆದರೆ, ಆಶಾ ಕಾರ್ಯಕರ್ತೆಯರ ಅಳಲು ಕೇಳಲು ನಿಮಗೆ ಸಮಯವಿಲ್ಲವೇ? ಎಂದು ಖಾರವಾಗಿ ಬಿಜೆಪಿ ಪ್ರಶ್ನಿಸಿದೆ.