ಕಂದಾಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಂದಾಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಸಹಾಯಕ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರೇ ಇಲ್ನೋಡಿ ಎಂದು ಜೆಡಿಎಸ್ ಬೊಟ್ಟು ಮಾಡಿ  ತೋರಿಸಿದೆ.

ಅರಕಲಗೂಡು ತಾಲ್ಲೂಕು ಕಚೇರಿಯಲ್ಲಿ ಲಂಚಬಾಕ ರೆವಿನ್ಯೂ ಇನ್ಸ್‌ ಪೆಕ್ಟರ್‌, ರೈತರ ಜಮೀನಿಗೆ ಖಾತೆ ಮಾಡಲು ಲಂಚ ಪಡೆಯುತ್ತಿದ್ದಾನೆ.

ಜಮೀನಿನ ಖಾತೆ ಮಾಡಿಕೊಡದಿದ್ದಕ್ಕೆ ನೊಂದ ರೈತ ತಾನು ಕೊಟ್ಟಿರುವ ಹಣ ವಾಪಸ್‌ ಕೇಳಿದ್ದಕ್ಕೆ, ಈ ನೀಚ ಮನಸ್ಥಿತಿಯ ಅಧಿಕಾರಿ ಯಾವ ರೀತಿ ಅಸಭ್ಯವಾಗಿ ತನ್ನನ್ನು ಸಮರ್ಥಿಸಿಕೊಂಡಿದ್ದಾನೆ ಕೇಳಿಸಿಕೊಳ್ಳಿ ಎಂದು ವಿಡಿಯೋ ಅಪ್ ಲೋಡ್ ಮಾಡಿದೆ.

ಇದೇನಾ ನಿಮ್ಮ ಜನಪರ ಆಡಳಿತ? ಕಂದಾಯ ಸಚಿವರೇ ಭ್ರಷ್ಟಾಚಾರದ ಕೂಪವಾಗಿರುವ ಕಂದಾಯ ಇಲಾಖೆಯನ್ನು ಸರಿಪಡಿಸಿ.

ಈ ಧನದಾಹಿ ಲಂಚಬಾಕ ರೆವಿನ್ಯೂ ಇನ್ಸ್‌ ಪೆಕ್ಟರ್‌ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ರೈತರನ್ನು ಬದುಕಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.

- Advertisement -  - Advertisement - 
Share This Article
error: Content is protected !!
";