ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕು,ತೂಬಗೆರೆ ಹೋಬಳಿ ಹಾಡೋನಹಳ್ಳಿ ಯಲ್ಲಿ ಜೆಡಿಎಸ್ ಪಕ್ಷ ಕಟ್ಟುವಲ್ಲಿ ನಿರತರಾಗಿ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಅವಿರತ ಹೋರಾಟ ದಿಂದ ತಾಲ್ಲೂಕಿನಲ್ಲಿ ನಾಯಕರಿಲ್ಲದಿದ್ದರು ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಯಾವುದೆ ರೀತಿಯಲ್ಲಿ ಸಮಸ್ಯೆ ಇಲ್ಲದೆ ಪಕ್ಷವನ್ನು ಮುನ್ನೆಡೆಸಿದ್ದ ಅಪ್ಪಯ್ಯಣ್ಣ ನವರ ಸಾವು ಪಕ್ಷಕ್ಕೆ ತುಂಬಲಾರದ ನಷ್ಠ ವಾಗಿದೆ ಹಾಗು ಪಂಚಾಯಿತಿ ರಾಜಕೀಯ ಅವರ ಪ್ರಾಮಾಣಿಕ ಸೇವೆ ಸ್ಮರಣೀಯ ಎಂದು ಕೇಂದ್ರ ಸಚಿವರಾದ ಹೆಚ್ ಡಿ. ಕುಮಾರಸ್ವಾಮಿ ತಿಳಿಸಿದರು.
ಹಾಡೋನಹಳ್ಳಿ ಗ್ರಾಮದ ರಂಗಮಂದಿರದಲ್ಲಿ ಆಯೋಜಿಸಿದ ನುಡಿ ನಮನ ವೇದಿಕೆಯಲ್ಲಿ ಮಾತನಾಡಿದ ಅವರು ದೆಹಲಿಯಲ್ಲಿ ಅಪ್ಪಯ್ಯಣ್ಣ ಅವರ ಸಾವಿನ ವಿಷಯ ತಿಳಿದಾಗ ನಂಬಲು ಸಾಧ್ಯ ವಾಗಲಿಲ್ಲ,ಈ ಕುರಿತು ತಪ್ಪು ಮಾಹಿತಿ ಇರಬೇಕು ನೋಡಿ ಎಂದು ಕೇಳಿದ್ದೆ ಅವರ ಜೀವನ ಶೈಲಿ, ಅವರು ಉತ್ತಮ ಆರೋಗ್ಯ ಹೊಂದಿದ್ದರು ಶತಾಹಿಷಿಯಾಗಿ ಬದುಕಬಹುದು ಎಂದು ಕೊಂಡಿದ್ದು ಅವರ ಸಾವು ಅನಿರೀಕ್ಷಿತ ವಾದ್ದರಿಂದ ನನ್ನ ಮನಸ್ಸಿಗೂ ಆಘಾತವಾಯಿತು ಎಂದರು.
ಅವರ ನಡೆದು ಬಂದ ದಾರಿ ಕುರಿತು ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ ಈ ಪುಸ್ತಕ ಅವರನ್ನು ಕುರಿತು ಕಿರು ಮಾಹಿತಿ ನೀಡಲಿದೆ, ನಮ್ಮ ಅವರ ಒಡನಾಟ ಬಹಳ ಹತ್ತಿರವಾದದ್ದು , ಸಣ್ಣ ಹಳ್ಳಿಯ ರೈತನ ಮಗನಾಗಿ ಜನಿಸಿದ ಅವರು ತಾಲ್ಲೂಕಿನ ನಾಯಕನಾಗಿ ಬೆಳೆದದ್ದು ಸುಲಭವಾಗಿರಲಿಲ್ಲ , ರಾಜ್ಯದಲ್ಲಿ ದೊಡ್ಡಬಳ್ಳಾಪುರ ಹಾಗೂ ಕನಕಪುರದಲ್ಲಿ ರಾಜಕೀಯ ಮಾಡುವುದು ಅಷ್ಟು ಸುಲಭವಲ್ಲ, ಸ್ಥಳೀಯ ಮಟ್ಟದ ಜೆಡಿಎಸ್ ಪಕ್ಷ ಸಂಘಟನೆ ಮಾಡುವಲ್ಲಿ ಅವರ ಕೊಡುಗೆ ಅಪಾರ, ತಳಮಟ್ಟದಿಂದ ಬೆಳೆದು ಬಂದ ನಾಯಕ ಎಂದರೇ ತಪ್ಪಾಗಲಾರದು ಎಂದರು.
ರೈತರಿಗೆ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ರೂಪಿಸಿದ ಕೀರ್ತಿ ಅವರದ್ದು ಸಹಕಾರಿ ಕ್ಷೇತ್ರದಲ್ಲಿ ರೈತ ಮಹಿಳೆಯರಿಗೆ ಆರ್ಥಿಕವಾಗಿ ಜೀವನ ಕಟ್ಟಿಕೊಳ್ಳಲು ಅನುಕೂಲವಾಯಿತು ಅವರ ಪ್ರಾಮಾಣಿಕ ಸೇವೆ ಅವರ ವ್ಯಕ್ತಿತ್ವ ಬಿಂಬಿಸುತ್ತದೆ ಎಂದರು.
ದೆಹಲಿಯಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮ ನಿರ್ಧಾರ ವಾಗಿದ್ದ ಕಾರಣ ನಾನು ಅವರ ಸಾವಿನ ಸಂದರ್ಭದಲ್ಲಿ ಬರಲು ಸಾಧ್ಯವಾಗಲಿಲ್ಲ, ಅದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮಿಗಳು ಆಶೀರ್ವಚನ ನೀಡಿದರು.
ನುಡಿನಮನ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಶಾಸಕ ದೀರಜ್ ಮುನಿರಾಜ್, ದೇವನಹಳ್ಳಿ ಮಾಜಿ ಶಾಸಕರಾದ ಚಂದ್ರಣ್ಣ, ನಿಸರ್ಗ ನಾರಾಯಣಸ್ವಾಮಿ, ಪಿಳ್ಳಮುನಿಶ್ವಾಮಪ್ಪ, ಜಿಲ್ಲಾ ಅಧ್ಯಕ್ಷ ಬಿ ಮುನೇಗೌಡ, ಮಾಜಿ ಎಂಎಲ್ ಸಿ ಇ ಕೃಷ್ಣಪ್ಪ, ಬಿಜೆಪಿ ಹನುಮಂತರಾಯಪ್ಪ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ, ಕುರುವಗೆರೆ ನರಸಿಂಹಯ್ಯ, ತೆಂಗು ಮತ್ತು ನಾರಿನ ಮಂಡಲಿ ಅಧ್ಯಕ್ಷ ವೆಂಕಟೇಶ ಬಾಬು, ಹಾಡೋನಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಮುನೇಗೌಡ, ಜೆಡಿಎಸ್ ಹಾಗು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.