ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವವರಿಗೆ ಇನ್ನು ಮುಂದೆ ಭಾರತದಲ್ಲಿ ಸಿಗಲಿದೆ ನಗದು ರಹಿತ ಚಿಕಿತ್ಸೆ!! ಎಂದು ಬಿಜೆಪಿ ಹರ್ಷ ವ್ಯಕ್ತಪಡಿಸಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವವರಿಗೆ 7 ದಿನಗಳ ಕಾಲ ಗರಿಷ್ಠ 1.5 ಲಕ್ಷ ನಗದು ರಹಿತ ಚಿಕಿತ್ಸೆ ದೊರೆಯಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿಚಿನ್ ಗಡ್ಕರಿ ಅವರು ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಳ್ಳುವವರ ಸಾವಿನ ಸಂಖ್ಯೆ ಇನ್ನು ಮುಂದೆ ಕ್ಷೀಣಿಸುವ ಸಾಧ್ಯತೆ ಅಧಿಕವಾಗಲಿದೆ ಎಂದು ಹೇಳಿದ್ದಾರೆ.