ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಟೆಂಡರ್ ಫಿಕ್ಸಿಂಗ್ ಕುಖ್ಯಾತಿಯ ಸಚಿವ ಟ್ರೋಲ್ ಪ್ರಿಯಾಂಕ್ ಖರ್ಗೆ ಅವರ ಹಿಂದೆ ಮುಂದೆ ಸುತ್ತಾಡಿಕೊಂಡಿದ್ದ ಕೊಲೆಗಾರ ರಾಜು ಕಪನೂರನ್ನು ಪ್ರಕರಣ ದಾಖಲಾಗಿ 15 ದಿನಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ!! ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಡೆತ್‌ನೋಟ್‌ನಲ್ಲಿ ಹೆಸರು ಬರೆದಿಟ್ಟರೂ ಒಬ್ಬ ಆರೋಪಿಯನ್ನು ಬಂಧಿಸಲು 15 ದಿನಗಳು ತೆಗೆದುಕೊಂಡಿದ್ದಾರೆ ಎಂದರೆ, ಇನ್ನು ಈ ಪ್ರಕರಣದಲ್ಲಿ ಮೃತ ಸಚಿನ್ ಪಾಂಚಾಳ್ ಕುಟುಂಬಕ್ಕೆ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಹೇಗೆ ನ್ಯಾಯ ದೊರೆಯಲು ಸಾಧ್ಯ..?? ಎಂದು ಬಿಜೆಪಿ ಪ್ರಶ್ನಿಸಿದೆ.
ಸಿಎಂ ಸಿದ್ದರಾಮಯ್ಯ ಅವರೆ, ಸಾಕ್ಷಿಗಳೆಲ್ಲವನ್ನೂ ನಾಶ ಮಾಡಿ, ಕಪನೂರನ್ನು ಬಂಧಿಸಿದರೆಷ್ಟು..?? ಬಿಟ್ಟರೆಷ್ಟು..?? ಎಂದು ಬಿಜೆಪಿ ಟೀಕಿಸಿದೆ.
ಸಚಿನ್ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದರೆ, ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕೆಂದರೆ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ನಾವು ಬಿಜೆಪಿ ಆಗ್ರಹಿಸುತ್ತದೆ ಎಂದಿದೆ.
ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಬಂಧನವಾಗಿದೆ. ಪ್ರಕರಣ ನಡೆದು ಎರಡು ವಾರ ಕಳೆದ ಬಳಿಕ ಆರೋಪಿಯನ್ನು ಬಂಧಿಸುವ ಮೂಲಕ ಸಾಕ್ಷ್ಯ ನಾಶಕ್ಕೆ ಸರ್ಕಾರವೇ ಅವಕಾಶ ಒದಗಿಸಿಕೊಟ್ಟಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತ ರಾಜು ಕಪನೂರು ಒಬ್ಬ ಗ್ಯಾಂಗ್ ಮಾಸ್ಟರ್ ಅಷ್ಟೇ, ಸಚಿವ ಪ್ರಿಯಾಂಕ್ ಖರ್ಗೆ ಇದರ ರಿಂಗ್ ಮಾಸ್ಟರ್. ಮರಿ ಖರ್ಗೆಯನ್ನು ಬಂಧಿಸುವ ಧಮ್ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಇದೆಯಾ? ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.
ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆಯ ಹೆಸರೂ ಉಲ್ಲೇಖವಾಗಿರುವುದರಿಂದ ಮೃತನಿಗೆ ನ್ಯಾಯ ಒದಗಿಸಬೇಕಾದರೆ ಸಚಿವ ಖರ್ಗೆಯ ಬಂಧನದ ಅಗತ್ಯತೆಯಿದೆ. ಮಾನ್ಯ ಸಿದ್ದರಾಮಯ್ಯ ಅವರೇ, ರಿಂಗ್ ಮಾಸ್ಟರ್ ಪ್ರಿಯಾಂಕ್ ಖರ್ಗೆಯ ಬಂಧನವೆಂದು? ಬಿಜೆಪಿ ಪ್ರಶ್ನಿಸಿದೆ.