ಫೋಟೋ ಜರ್ನಲಿಸ್ಟ್ ಶಿವಮೊಗ್ಗ ನಂದನ್ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಮಲೆನಾಡಿನ ಖ್ಯಾತ ಫೋಟೋ ಜರ್ನಲಿಸ್ಟ್ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಶಿವಮೊಗ್ಗ ನಂದನ್ (
57ವರ್ಷ) ಹೃದಯಾಘಾತದಿಂದ ನಿಧನರಾಗಿದ್ದಾರೆ. ರೈಲ್ವೆ ನಿಲ್ದಾಣದ (ಬ್ಲಡ್ ಬ್ಯಾಂಕ್ ಬಳಿ) ಬಳಿ ಇರುವ ಅವರ ಮನೆಯಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಅನಾರೋಗ್ಯ ಹಿನ್ನೆಲೆ ಕಳೆದ ರಾತ್ರಿ ನಂಜಪ್ಪ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗ ನಂದನ್ ಅವರ ಪಾರ್ಥೀವ ಶರೀರವನ್ನು ಶಿವಮೊಗ್ಗ ರೈಲ್ವೆ ನಿಲ್ದಾಣ ಸಮೀಪ ಇರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಮೃತರಿಗೆ ಪತ್ನಿ
, ಪುತ್ರ ಮತ್ತು ಪುತ್ರಿ ಇದ್ದಾರೆ. ಇವರು ಕುವೆಂಪು ವಿವಿಯಲ್ಲಿ ಪೋಟೊ ಜರ್ನಲಿಸಂ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸುತ್ತಿದ್ದರು. ಸಹೃದಯಿ ಆಗಿದ್ದ ನಂದನ್ ಚಿತ್ರಗಳು ಸಾಕಷ್ಟು ಜನರನ್ನು ಸೆಳೆದಿತ್ತು.

ನಂದನ್ ಹೋರಾಟಗಾರರು ಸಹ ಆಗಿದ್ದರು.ಶಿವಮೊಗ್ಗ ನಗರದ ಹೊರವಲಯದ ಹರಿಗೆ ಬಳಿ ನಂದನ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ, ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ನಂದನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಪರಾರಿಯಾಗಿದ್ದರು.ಇದರಿಂದ ತೀವ್ರ ಗಾಯಗೊಂಡ ನಂದನ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರ ಸೊಂಟ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿತ್ತು.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪರಿಸರ ಸಂಘಟನೆಗಳು, ಇದೊಂದು ಉದ್ದೇಶಪೂರ್ವಕ ವ್ಯವಸ್ಥಿತ ಸಂಚು ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದಿದ್ದವು‌.ಪತ್ರಕರ್ತರಿಗೆ ಅನ್ಯಾಯವಾದ ವೇಳೆ ಮೊದಲು ಮುಂದೆ ಬರುತ್ತಿದ್ದು ನಂದನ್ ಇಂದು ಇಲ್ಲವಾಗಿದ್ದು, ಶಿವಮೊಗ್ಗಕ್ಕೆ ತುಂಬಲಾರದ ನಷ್ಟವಾಗಿದೆ‌.

- Advertisement -  - Advertisement - 
Share This Article
error: Content is protected !!
";