ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರೋಗ್ಯ ಕ್ಷೇತ್ರದ ಅತಿದೊಡ್ಡ ಕ್ರಾಂತಿಗೆ ಕಾರಣವಾದ ಆಯುಷ್ಮಾನ್ ಭಾರತ್ ಯೋಜನೆ (AB-PMJAY) ಅಡಿಯಲ್ಲಿ 70 ವರ್ಷ ವಯಸ್ಸಿನ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೂ ವಿಸ್ತರಿಸಿ ಅವರ ಆದಾಯದ ಸ್ಥಿತಿ ಲೆಕ್ಕಿಸದೆ ಆರೋಗ್ಯ ರಕ್ಷಣೆ ನೀಡುವ ಯೋಜನೆ ವಿಸ್ತರಿಸಿ ಆರೋಗ್ಯ ಭಾರತ ನಿರ್ಮಿಸಲು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪಣ ತೊಟ್ಟಿದೆ.
ಆದರೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳೆಂದರೆ ಸದಾ ತಾತ್ಸಾರ ಧೋರಣೆ ಅನುಸರಿಸುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ಹಿರಿಯ ನಾಗರಿಕರ ಭರವಸೆಯ ಜೀವನದ ಅಭಯವಾಗಿದ್ದ ಆಯುಷ್ಮಾನ್ ಭಾರತ ಯೋಜನೆ ಜಾರಿಗೊಳಿಸುವಲ್ಲಿ ತೋರುತ್ತಿರುವ ನಿರಾಸಕ್ತಿಯಿಂದ ಇದು ಜನವಿರೋಧಿ ಸರ್ಕಾರವೆಂದು ಹಿರಿಯ ಜೀವಗಳು ಹಿಡಿ ಶಾಪ ಹಾಕುತ್ತಿವೆ.
ಕೇವಲ ಮತ ಬ್ಯಾಂಕ್ ಆಧಾರಿತ ಯೋಜನೆಗಳನ್ನಷ್ಟೇ ಅಪ್ಪಿಕೊಳ್ಳುವಲ್ಲಿ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಯ ವಿಷಯದಲ್ಲಿ ರಾಜಕೀಯ ಬೆರೆಸದೇ ರಾಜ್ಯದಲ್ಲಿ ಆಯುಷ್ಮಾನ್ ಭಾರತ ಯೋಜನೆಯ ಸೌಲಭ್ಯ ಹಿರಿಯ ನಾಗರಿಕರಿಗೆ ತಲುಪಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆಂದು ವಿಜಯೇಂದ್ರ ತಿಳಿಸಿದ್ದಾರೆ.