ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಧ್ಯ ಕರ್ನಾಟಕದ ಏಕೈಕ ರೈತರ ಜೀವನಾಡಿ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ಮಂಗಳವಾರ 130.00 ಅಡಿಗೆ ಏರಿಕೆಯಾಗಿ ಭರ್ತಿಯಾಗಿ ನೀರಿನ ಒಳ ಹರಿವಿನಷ್ಟು ನೀರು ಕೋಡಿ ಮೂಲಕ ಕಾಲುವೆಗಳಿಗೆ ಹರಿಯುತ್ತಿದೆ.
2025ರ ಜನವರಿ-11ರಂದು ಶನಿವಾರ ವಿವಿ ಸಾಗರ ಭರ್ತಿಯಾಗಿ ಕೋಡಿ ಹರಿಯುವ ಮೂಲಕ 3ನೇ ಬಾರಿಗೆ ಭರ್ತಿಯಾಗಿದೆ. ಕೋಡಿ ಮೇಲೆ ಹರಿಯುವ ಹೆಚ್ಚುವರಿ ನೀರನ್ನು ಕಾಲುವೆಗಳ ಮೂಲಕ ಹರಿಸಲಾಗುತ್ತಿದೆ.
ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ಪ್ರತಿ ದಿನ 693 ಕ್ಯೂಸೆಕ್ ನೀರಿನ ಒಳ ಹರಿವು ಇದೆ.
ತರೀಕೆರೆ ಸಮೀಪದ ಬೆಟ್ಟದತಾವರೆಕೆರೆ ಸಮೀಪ ಇರುವ ಪಂಪ್ ಹೌಸ್ ನಿಂದ ಪ್ರತಿ ನಿತ್ಯ ಒಂದು ಪಂಪ್ ರನ್ ಮಾಡಿ ವಿವಿ ಸಾಗರಕ್ಕೆ ನೀರು ಹರಿಸಲಾಗುತ್ತಿರುವುದರಿಂದ ಸುಮಾರು 693 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಇನ್ನು ವಾಣಿ ವಿಲಾಸ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಒಟ್ಟು 135 ಅಡಿ ಆಗಿದ್ದು, 130 ಅಡಿಗೆ ಕೋಡಿ ಹರಿಯಲಿದೆ. ಜಲಾಶಯದಲ್ಲಿ 30 ಟಿಎಂಸಿ ಅಡಿ ನೀರು ಸಂಗ್ರಹವಾಗುವ ಸಾಮರ್ಥ್ಯ ಹೊಂದಿದೆ.