ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಇತಿಹಾಸದಲ್ಲಿನ ಕಡು ದಲಿತ ವಿರೋಧಿ ಸರ್ಕಾರವೆಂದರೆ ಅದು ಕರ್ನಾಟಕ ಕಾಂಗ್ರೆಸ್ ಸರ್ಕಾರ!! ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ದಲಿತರ ಪಾಲಿನ ಅನುದಾನ, ಅವಕಾಶ, ಸೈಟು ಸೇರಿದಂತೆ ಎಲ್ಲವನ್ನೂ ಕಬಳಿಸಿರುವ ಸಿಎಂ ಸಿದ್ದರಾಮಯ್ಯ ಅವರ ಓಲೈಕೆ ಆಡಳಿತದಲ್ಲಿ ದಲಿತರು ಸಾಕಿರುವ ಹಸುಗಳಿಗೂ ರಕ್ಷಣೆಯಿಲ್ಲ!!! ಎಂದು ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ ಮಾಡಿದೆ.
ಸಿದ್ದರಾಮಯ್ಯ ಅವರೆ, ದೂರದ ರಾಜ್ಯಗಳ ದನಗಳ್ಳರಿಗೆ ಕಂಬನಿ ಸುರಿಸಿ ಮಿಡಿದ ನಿಮ್ಮ ಹೃದಯ, ವಿಧಾನಸೌಧದ ಕೂಗಳತೆ ದೂರದಲ್ಲಿರುವ ಚಾಮರಾಜಪೇಟೆಯಲ್ಲಿ ರಕ್ತ ಸುರಿಸಿಕೊಂಡು ನಿಂತಿರುವ ಮೂಕ ಹಸುಗಳಿಗೇಕೆ ಮಿಡಿಯಲಿಲ್ಲ..??!! ಎಂದು ಬಿಜೆಪಿ ಪ್ರಶ್ನಿಸಿದೆ.