ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಸವಿ ಸಂಕ್ರಾಂತಿ
ಬಂಗಾರದ
ರಂಗಿನ ಬೆಳಕಿನ
ನವಿರು ಹೊಳಪಿನಲಿ
ಹುಟ್ಯಾನ ಸೂರ್ಯ
ನಲಿಸ್ಯಾನ
ಚಿಗುರು ಚಲುವಿನ
ಚಿತ್ತಾರ ಬಿಡಿಸ್ಥಾನ
ಪ್ರಕೃತಿಯ ಒಡಲ
ತುಂಬ್ಯಾನ
ನಳ ನಳಿಸಿ
ಫಲ ಪುಷ್ಪಗಳ
ಅರಳಿಸಿ
ಶೃಂಗಾರಗೊಳಿಸ್ಯಾನ
ಮನೆ ಮನಗಳಗೆ
ಬಂದಾನ ಕುದುರೆಯೇರಿ
ಸದರ ತೊರ್ಯಾನ
ಬಿಂಕ ಬಿಟ್ಟಾನ
ಬಿಂದಾಸಾಗಿ
ಬರ ಮಾಡಿಕೊಳ್ಳಿ
ಮನೆ ತುಂಬಿಸಿಕೊಳ್ಳಿ
ಎಳ್ಳು ಬೆಲ್ಲವ ಹಂಚಿ
ಆಚರಿಸಿ
ಸ… ಕ್ರಾಂ….ತಿ
ಸಂಕ್ರಾಂತಿಯ ಶುಭಾಶಯಗಳು
ಗುಜ್ಜರ್, ದಾವಣಗೆರೆ.