ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ “ಕಮಿಷನ್ ಮೋಡ್ ಆನ್” ಆಗಿದೆ. ಸರ್ಕಾರಕ್ಕೆ ಸರ್ಕಾರವೇ ಕಮಿಷನ್ ದಂಧೆಯಲ್ಲಿ ತೊಡಗಿದೆ ಎಂದು ಬಿಜೆಪಿ ಆರೋಪಿಸಿದೆ.
ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕರು ಗುತ್ತಿಗೆದಾರರಿಂದ ಶೇ.20% ಕಮಿಷನ್ ಪಡೆಯುತ್ತಿದ್ದರೆ, ಸಚಿವರು ಶೇ.40% ಕಮಿಷನ್ ಪಡೆಯುತ್ತಿದ್ದಾರೆ.ಕೆಪಿಸಿಸಿಗೆ 60% ಕಮಿಷನ್ ಸಂದಾಯವಾಗುತ್ತಿದೆ ಎಂದು ಬಿಜೆಪಿ ದೂರಿದೆ.
ಅಕ್ರಮವಾಗಿ ಸಂಗ್ರಹಿಸಿದ ಹಣದಲ್ಲಿ ಅರ್ಧ ಪಾಲು ನಕಲಿ ಗಾಂಧಿ ವಂಶಸ್ಥರ ಜೋಳಿಗೆಗೆ ವರ್ಗಾವಣೆಯಾಗುತ್ತಿದೆ. ಕಾಂಗ್ರೆಸ್ಸಿನ ಕಮಿಷನ್ ದಂಧೆಗೆ ಕಾಂಗ್ರೆಸ್ ಹೈಕಮಾಂಡ್‌ಬೆಂಗಾವಲಾಗಿ ನಿಂತಿರುವುದರಿಂದ ರಾಜಾರೋಷವಾಗಿ ಕಮಿಷನ್ ಕಲೆಕ್ಷನ್ ನಡೆಯುತ್ತಿದೆ. ಕಮಿಷನ್ ಆರೋಪಕ್ಕೆ ಸಾಕ್ಷ್ಯ ಕೇಳುತ್ತಿದ್ದ ಸಿಎಂ ಸಿದ್ದರಾಮಯ್ಯನವರು ಈಗೇನು ಹೇಳುತ್ತಾರೆ!? ಎಂದು ಬಿಜೆಪಿ ಪ್ರಶ್ನಿಸಿದೆ.