ಜ.19 ರಂದು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಚುನಾವಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಶೆಟ್ಟಿಹಳ್ಳಿ ವಿವಿದೋದ್ದೇಶ ಪ್ರಾಥಮಿಕ ಕೃಷಿ
  ಸಹಕಾರ ಸಂಘದ   ಮುಂದಿನ 5 ವರ್ಷಗಳ  ಅವಧಿಗೆ  ನಿರ್ದೇಶಕರನ್ನು ಆಯ್ಕೆ ಮಾಡುವ ವಿಚಾರಕ್ಕೆ ಸಂಬಂದಿಸಿದಂತೆ ದಿನಾಂಕ.19.01.2025ರಂದು ಚುನಾವಣೆ ನೆಡೆಯಲಿದೆ.

- Advertisement - 

ಚುನಾವಣಾ ಪ್ರಕ್ರಿಯೆಯಂತೇ  ನಾಮಪತ್ರ ವಾಪಾಸು ತೆಗೆಯಲು ಇಂದು ಜ.15 ಅಂತಿಮ ದಿನವಾಗಿತ್ತು. ಇಂದು ಬಹಳಷ್ಟು ನಾಮಪತ್ರಗಳು ವಾಪಾಸಾತಿ ನಂತರ 11 ನಿರ್ದೇಶಕರ ಆಯ್ಕೆಯ ನಿಟ್ಟಿನಲ್ಲಿ ಅಂತಿಮವಾಗಿ ಕಣದಲ್ಲಿ 31 ಅಭ್ಯರ್ಥಿಗಳು ಚುನಾವಣೆ ಎದುರಿಸಲು ಸಿದ್ದರಾಗಿದ್ದಾರೆ.

- Advertisement - 

ಸುಮಾರು ಆಜುಬಾಜು 238 ಮತದಾರರು ಅಭ್ಯರ್ಥಿಗಳ ಹಣೆಪಟ್ಟಿ ಬರೆಯಲು ಸಿದ್ದರಾಗಿದ್ದಾರೆ. ಅದಕ್ಕೂ ಮುಂಚೆ ಬಹಳಷ್ಟು ರಾಜಕೀಯ ಮುಖಂಡರು ಬಹಳಷ್ಟು ರೀತಿಯಲ್ಲಿ ಅವಿರೋಧ ಆಯ್ಕೆ ಮಾಡಲು ಪ್ರಯತ್ನಿಸಿದ್ದರು ಆದರೂ ಅದು ಯಶಸ್ವಿಯಾಗದ ಹಿನ್ನಲೆಯಲ್ಲಿ ಅಂತಿಮವಾಗಿ ಚುನಾವಣೆ ಎದುರಿಸಲು ಅಭ್ಯರ್ಥಿಗಳು ಸಿದ್ದರಾಗುವ ಪ್ರಸಂಗ ಎದುರಾಯಿತು.

 

- Advertisement - 

 

 

Share This Article
error: Content is protected !!
";