ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗುರುವರ್ಯರ ಮಾರ್ಗದರ್ಶನ ಸಮಾಜಕ್ಕೆ ಬೆಳಕು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನವಾದ ಜನವರಿ–18ರ ದಿನದಂದು ಸ್ವಾಮೀಜಿಗಳ ಪ್ರಗತಿಪರ ಸಾಮಾಜಿಕ ಕಾರ್ಯಗಳನ್ನು ನೆನೆದು ಭಕ್ತಿಪೂರ್ವಕವಾಗಿ ಪ್ರಣಾಮಗಳನ್ನು ಅರ್ಪಿಸುತ್ತೇನೆ.
ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಆದಿ ಚುಂಚನಗಿರಿ ಮಠದ ಆಡಳಿತಕ್ಕೆ ಪೀಠಾಧಿಪತಿಗಳಾಗೀf ಆದಿಚುಂಚನಗಿರಿ ಮಠದ ಹೆಸರಿನಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ, ಪರಿಸರ, ಪ್ರಾಣಿ ಸಂರಕ್ಷಣೆ, ವೇದಾಧ್ಯಯನ, ಕೃಷಿ ಸೇರಿದಂತೆ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ಸಮಾಜದ ಬೆಳವಣಿಗೆಗೆ ಶ್ರಮಿಸಿದ್ದಾರೆ.
ಆದಿ ಚುಂಚನಗಿರಿ ಮಠದ ವ್ಯಾಪ್ತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ. ಒಕ್ಕಲಿಗ ಮಠದ ಅಧಿಪತಿಯಾದರೂ ಸರ್ವಜನಾಂಗದ ಬಗ್ಗೆ ಶ್ರೀಗಳು ಅಪಾರ ಗೌರವ ಹೊಂದಿದ್ದರು. ಶ್ರೀಗಳು ಸರ್ವಜನಾಂಗದ ಸಹಬಾಳ್ವೆಯ ಬಗ್ಗೆ ಸಮಾಜಕ್ಕೆ ಬೋಧನೆ ಮಾಡುತ್ತಿದ್ದರು.
ಹಿಂದುಳಿದವರ, ದಲಿತರ ಉದ್ಧಾರಕ್ಕಾಗಿ ಶಿಕ್ಷಣ ನೀಡಲು ಶಿಕ್ಷಣ ಸಮೂಹವನ್ನೇ ನಿರ್ಮಿಸಿ ಕ್ರಾಂತಿಯನ್ನು ಮಾಡಿದರು. ಅನ್ನದಾಸೋಹ, ಅಕ್ಷರದಾಸೋಹದ ಮೂಲಕ ಬಡ ಜನರ ಪರವಾಗಿ ಸೇವೆಯನ್ನು ಮಾಡಿದರು.
ರೈತರ ಬದುಕಿಗೆ ಆಸರೆಯಾಗಲೂ ಅನೇಕ ಆಧುನಿಕ ಪ್ರಗತಿಪರ ಯೋಜನೆಗಳನ್ನು ರೈತರಿಗೆ ಪರಿಚಯಿಸುವ ಮೂಲಕ ಹಸಿರುಕ್ರಾಂತಿ ಹರಿಕಾರ ಎಂದು ಹೆಸರುಗಳಿಸಿದರು. ಶ್ರೀಗಳು 5 ಕೋಟಿ ಸಸಿಗಳನ್ನು ನಾಟಿ ಮಾಡಿದ್ದಾರೆ ಈ ಮೂಲಕ ಒಂದು ಹೊಸ ಇತಿಹಾಸ ನಿರ್ಮಾಣವಾಗಿದೆ. ಸಸ್ಯರಾಶಿಯ ಬಗ್ಗೆ ಗುರುವರ್ಯರ ಮಾರ್ಗದರ್ಶನ ಪರಿಸರ ಸಂರಕ್ಷಣೆಗೆ ಪುಷ್ಟಿ ಸಿಕ್ಕಿದೆ.
ಆದಿಚುಂಚನಗಿರಿ ಮಠದ ಈಗಿನ ಪೀಠಾಧಿಪತಿಗಳಾದ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಜನ್ಮದಿನಾಚರಣೆ ಅಂಗವಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಮಠದ ಆವರಣದಲ್ಲಿ ನೀಡುತ್ತಾ ಬಂದಿದ್ದಾರೆ. ಅದರಂತೆ ಈ ಬಾರಿಯೂ ಮೂರ್ನಾಲ್ಕು ದಿನಗಳ ಕಾಲ ಸಾರ್ವಜನಿಕ ಹಿತಾಸಕ್ತಿಯ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಠದ ಭಕ್ತರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ರಘು ಗೌಡ ತಿಳಿಸಿದ್ದಾರೆ.

