ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನಲ್ಲಿ ಯುಎಸ್‌ಕಾನ್ಸುಲೇಟ್‌ಕಚೇರಿ ಆರಂಭಕ್ಕೆ ಮುನ್ನಡಿ ಹಾಕಿದ್ದು ಹೆಚ್.ಡಿ. ಕುಮಾರಸ್ವಾಮಿ ಅವರು ಎಂದು ಜೆಡಿಎಸ್ ತಿಳಿಸಿದೆ.
2006 ಮತ್ತು 2018ರಲ್ಲಿಮುಖ್ಯಮಂತ್ರಿಯಾಗಿದ್ದ ವೇಳೆ ಹೆಚ್.ಡಿ.ಕುಮಾರಸ್ವಾಮಿ ಅವರು ಅಮೆರಿಕಾದ ರಾಯಭಾರಿ ಕನ್ನಿತ್‌ಜಸ್ಟರ್‌ಅವರನ್ನು ಭೇಟಿಯಾಗಿ ಬೆಂಗಳೂರಿನಲ್ಲಿ ಅಮೆರಿಕಾದ ಕಾನ್ಸುಲೇಟ್‌ಸ್ಥಾಪಿಸಬೇಕು ಎಂದು ಮನವಿ ಸಲ್ಲಿಸಿದ್ದರು.
ಅಂದೇ ಬ್ರ್ಯಾಂಡ್‌ಬೆಂಗಳೂರಿನ ಕನಸು ಸಾಕಾರಗೊಳಿಸುವ ಅಭಿವೃದ್ಧಿಯ ಪ್ರಗತಿ ಪಥದಲ್ಲಿ ಮುನ್ನುಡಿ ಬರೆದಿದ್ದರು. ಕುಮಾರಸ್ವಾಮಿಯವರ ಪ್ರಯತ್ನವೇ ಇಂದು ಬೆಂಗಳೂರಿನಲ್ಲಿ ಯುಎಸ್‌ಕಾನ್ಸುಲೇಟ್‌ಕಾರ್ಯಾರಂಭ ಮಾಡುತ್ತಿದೆ ಎಂದು ಜೆಡಿಎಸ್ ಮೆಚ್ಚುಗೆ ವ್ಯಕ್ತಪಡಿಸಿದೆ.
ಯಾರು ಕಟ್ಟಿದ ಮನೆಗೆ, ಬೇರೆ ಯಾರೋ ಗೃಹಪ್ರವೇಶ ಮಾಡಿದರು ಎನ್ನುವಂತೆ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ಅದರ ಕ್ರೆಡಿಟ್‌ತಮ್ಮದು ಎಂದು ಬಿಟ್ಟಿ ಪ್ರಚಾರ ಪಡೆಯುವುದಕ್ಕೆ ನಾಚಿಕೆಯಾಗಬೇಕು. ಸಚಿವ ಪ್ರಿಯಾಂಕ್ ಖರ್ಗೆ ಅವರೇ ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ, ರಾಜಕೀಯ ಪ್ರಭಾವ ಬಳಸಿಕೊಂಡು ನಿಮ್ಮ ಕುಟುಂಬದ ಸಿದ್ಧಾರ್ಥ್‌ವಿಹಾರ ಟ್ರಸ್ಟ್‌ಗೆ 5 ಎಕರೆ ಹೈಟೆಕ್ ಡಿಫೆನ್ಸ್‌ಏರೋಸ್ಪೇಸ್‌ಪಾರ್ಕ್‌ನಲ್ಲಿ ಜಮೀನು ಹಂಚಿಕೆ ಮಾಡಿಸಿಕೊಂಡಂತೆ ಅಲ್ಲ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಯುಎಸ್‌ಕಾನ್ಸುಲೇಟ್‌ಕಚೇರಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಿರುವುದು ಕುಮಾರಸ್ವಾಮಿಯವರ ದೃಢ ನಿರ್ಧಾರ ಮತ್ತು ಒತ್ತಾಸೆಯ ಪ್ರತಿಫಲ. ಅದನ್ನು ಕಾಂಗ್ರೆಸ್‌ಸರ್ಕಾರ ಮತ್ತು ಕಾಂಗ್ರೆಸ್‌ನಾಯಕರು ಮರೆಯಬಾರದು ಎಂದು ಜೆಡಿಎಸ್ ಒತ್ತಿ ಹೇಳಿದೆ.
ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿ ಸ್ಥಾಪನೆಯ ಬಹುದಿನಗಳ ಕನಸು ಇಂದು ನನಸಾಗಿದೆ. ಇನ್ಮುಂದೆ ವೀಸಾ ಬೆಂಗಳೂರಿನಲ್ಲಿ ಸಿಗಲಿದೆ. 2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ, ಹೆಚ್.ಡಿ.ಕುಮಾರಸ್ವಾಮಿ ಅವರು ಭಾರತದಲ್ಲಿನ US ರಾಯಭಾರಿ ಕೆನೆತ್ ಜಸ್ಟರ್ ಅವರನ್ನು ಭೇಟಿ ಮಾಡಿ, ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಸ್ಥಾಪಿಸುವಂತೆ ಮನವಿ ಮಾಡಿದ್ದರು.

ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಕೇಂದ್ರವಾಗಿ ವಿಶ್ವ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಸಿಲಿಕಾನ್ ಸಿಟಿಯ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಅವರ ದೂರದೃಷ್ಟಿ, ದೃಢ ಸಂಕಲ್ಪ ಮತ್ತು ಚಿಂತನೆಯ ಪ್ರತಿ ಫಲವಾಗಿ ಇಂದು ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿ ಆರಂಭವಾಗಿದೆ ಎಂದು ಜೆಡಿಎಸ್ ತಿಳಿಸಿದೆ.

