ತೊಗರಿ ಖರೀದಿ ಕೇಂದ್ರ ತೆರೆಯದ ರಾಜ್ಯ ಸರ್ಕಾರ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರದ ಎನ್‌ಡಿಎ ಮೈತ್ರಿ ಸರ್ಕಾರ ರಾಜ್ಯದಲ್ಲಿ 3,06,150 ಮೆಟ್ರಿಕ್‌ಟನ್‌ತೊಗರಿ ಖರೀದಿ ಮಾಡಲು ಡಿಸೆಂಬರ್‌ತಿಂಗಳಲ್ಲಿ ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರ ತೊಗರಿ ಖರೀದಿಗೆ ಮುಂದಾಗಿಲ್ಲ ಎಂದು ಜೆಡಿಎಸ್ ಆರೋಪಿಸಿದೆ.

ಆದರೆ, ರೈತ ಪರ ಕಾಳಜಿ ಇಲ್ಲದ 60% ಪರ್ಸೆಂಟ್‌ಕರ್ನಾಟಕ ಕಾಂಗ್ರೆಸ್ ಸರ್ಕಾರ, ಯಾವ ಜಿಲ್ಲೆಯಲ್ಲೂ ಬೆಂಬಲ ಬೆಲೆ ಯೋಜನೆ ಅಡಿ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ. 

- Advertisement - 

ಸಿದ್ದರಾಮಯ್ಯ ಸರ್ಕಾರದ ವಿಳಂಬ ಧೋರಣೆಯಿಂದಾಗಿ ತೊಗರಿ ಬೆಳಗಾರರಿಗೆ ಬೆಲೆ ನಷ್ಟ ಅನುಭವಿಸುತ್ತಿದ್ದಾರೆ.  ನಾಲಾಯಕ್‌ಕೃಷಿ ಮಂತ್ರಿ ಚಲುವರಾಯಸ್ವಾಮಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ್ ಪಾಟೀಲ್ ಇಬ್ಬರೂ ಕಾಣೆಯಾಗಿದ್ದು ಅವರನ್ನು ಹುಡುಕಿಕೊಡಿ ಎಂದು ರೈತರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಜೆಡಿಎಸ್ ಕಿಡಿ ಕಾರಿದೆ.

 

- Advertisement - 

 

 

Share This Article
error: Content is protected !!
";