ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾನು ಜೀವನ ಪರ್ಯಂತ ಬ್ರಿಟಿಷರ ಗುಲಾಮಗಿರಿ ಮಾಡಲು ಸಿದ್ಧನಿದ್ದೇನೆ. ಆದರೆ ದಲಿತರಿಗೆ, ಹಿಂದುಳಿದವರಿಗೆ, ಮುಸ್ಲಿಮರಿಗೆ ಸರಿಸಮಾನ ಅಧಿಕಾರ ಕೊಡುವುದಾದರೆ ನಮಗೆ ಅಂತಹ ಸ್ವಾತಂತ್ರ್ಯವೇ ಬೇಡ!- ಆರೆಸ್ಸೆಸ್ಸ್ ಸಂಸ್ಥಾಪಕ ಗೋಲ್ವಾಲ್ಕರ್ (ಸ್ವಾತಂತ್ರ್ಯ ಪೂರ್ವದಲ್ಲಿ ಹೇಳಿದ್ದ ಮಾತು) ಎಂದು ಕಾಂಗ್ರೆಸ್ ಕೋಟ್ ಮಾಡಿ ಕಿಡಿಕಾರಿದೆ.
ನಾವು ಅಂಬೇಡ್ಕರ್ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ, ಇದು ಪಾಶ್ಚಿಮಾತ್ಯ ಮೌಲ್ಯಗಳಾದ ಸಮಾಜವಾದ – ಪ್ರಜಾತಂತ್ರಗಳಿಂದ ಪ್ರಭಾವಿತವಾಗಿದೆ. ಭಾರತೀಯ ಸಂಸ್ಕೃತಿಯ ಸಾರವಾದ ‘ಮನಸ್ಮೃತಿ‘ಯೇ ನಮ್ಮ ನಿಜವಾದ ಸಂವಿಧಾನ!- ಆರ್‌ಎಸ್‌ಎಸ್ ಮುಖವಾಣಿ ‘ಅರ್ಗನೈಸರ್‘ (1949 ನವಂಬರ್ 30) ಹೇಳಿದ್ದರು ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಅದರ ಮುಂದುವರಿದ ಭಾಗವಾಗಿ ಇತ್ತೀಚೆಗಷ್ಟೇ ಕೇಂದ್ರ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕುರಿತು ಹಗುರವಾಗಿ ಮಾತನಾಡಿದ್ದರು. ಇದೀಗ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು “ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು 1947ರಲ್ಲಿ ಅಲ್ಲ” ಎಂದು ಹೇಳುವ ಮೂಲಕ ಇಡೀ ಸ್ವಾತಂತ್ರ್ಯ ಹೋರಾಟವನ್ನು ಅಪಮಾನಿಸಿದ್ದಾರೆ. ಇತಿಹಾಸವನ್ನು ಮರೆತವರು ಇತಿಹಾಸ ನಿರ್ಮಿಸಲಾರರು! ಎಂದು ಕಾಂಗ್ರೆಸ್ ಎಚ್ಚರಿಸಿದೆ.

