ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜು ಮತ್ತು ಅಲ್ಟ್ರಾ ಟೆಕ್ ಸಿಮೆಂಟ್ ಸುಜ್ಞಾನ ದೀಪಿಕಾ ಸಂಸ್ಥೆ ಮತ್ತು ಬೆಂಗಳೂರು ಜಿಲ್ಲಾ ಪೊಲೀಸ್ ಇವರ ಸಂಯುಕ್ತ ಆಶ್ರಯದಲ್ಲಿ “ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ”ಕಾರ್ಯಕ್ರಮವನ್ನು ನಗರದ ಡಿ ಕ್ರಾಸ್ ನಿಂದ ಪ್ರವಾಸಿ ಮಂದಿರದ ಹೊರೆಗೂ ಜಾಥಾ ಮಾಡುವ ಮೂಲಕ ಸಾರ್ವಜನಿಕರಿಗೆ ಅಪಘಾತದಿಂದಾಗುವ ಅನಾಹುತಗಳ ಅರಿವು ಮೂಡಿಸಲಾಯಿತು.
ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವೇಷಭೂಷಣ ಅದರಲ್ಲೂ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂತೋಷ್ ಯಮಧರ್ಮ ಬಿ ಹೆಚ್ ಪವನ್ ಕುಮಾರ್ ಚಿತ್ರ ಗುಪ್ತನ ವೇಷ ಧರಿಸಿ ಸಾರ್ವಜನಿಕರು ಅತಿ ವೇಗವಾಗಿ ವಾಹನ ಚಲಾಯಿಸಿದಾಗ ವಿಲೀಂಗ್ ಮಾಡಿದಾಗ ಅಪಘಾತ ಉಂಟಾದರೆ ಯಮನ ಪಾದ ಸೇರಬೇಕಾಗುತ್ತದೆ ಎಂದು ಎಚ್ಚರಿಸಿದರು.
“ರಸ್ತೆ ಸುರಕ್ಷತಾ ಸಪ್ತಾಹ ಜಾಥಾ”ವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಸೂರ್ಯ ಎಜುಕೇಷನ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಡಾ.ಹೆಚ್.ಜಿ ವಿಜಯಕುಮಾರ್, ಅಪಘಾತವಾದ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು ನೀರನ್ನು ಕುಡಿಸಬಾರದು ತಕ್ಷಣ ಅಂಬ್ಯುಲೆನ್ಸ್ ಗೆ ಕರೆಮಾಡಿ ಆಸ್ಪತ್ರೆಗೆ ದಾಖಲು ಮಾಡಬೇಕು ಎಂದು ಹೇಳಿದರು.
ಸರ್ಕಲ್ ಇನ್ಸ್ಪೆಕ್ಟರ್ ಅಮರೇಶ್ ಗೌಡ ಮಾತನಾಡಿ ವಾಹನ ಸವಾರರು ಅದಷ್ಟು ವೇಗ ಕಡಿಮೆ ಮಾಡಬೇಕು ವೇಗಮಿತಿಯಲ್ಲಿದ್ದರೆ ಹೆಲ್ಮೆಟ್ ಧರಿಸಿದ್ದರೆ ಸೀಟ್ ಬೆಲ್ಟ್ ಹಾಕಿದ್ದರೆ ಅಪಘಾತ ಸಂಭವಿಸಿದರೂ ಅಪಾಯದಿಂದ ಪಾರಾಗಬಹುದು ಎಂದು ಹೇಳಿದರು.
ಅಲ್ಟ್ರಾ ಟೆಕ್ ಸಿಮೆಂಟ್ ಕಾರ್ಖಾನೆ ಜನರಲ್ ಮ್ಯಾನೇಜರ್ ಪಂಕಜ್ ಶರ್ಮಾ, ಸುಜ್ಞಾನ ದೀಪಿಕಾ ಸಂಸ್ಥೆಯ ಮುಖ್ಯಸ್ಥ ಎಂ ಎಸ್ ಮಂಜುನಾಥ್ ಮಾತನಾಡಿದರು.
ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ ಸಿ ಮಂಜುನಾಥ್, ಉಪನ್ಯಾಸಕರಾದ ಪುನೀತ್ ಟಿ, ಉಮ್ಮೆಮುಸ್ಕಾನ್, ಸೌಮ್ಯಶ್ರೀ ಕೆ ವಿ, ಮೊಹನ್ ಕುಮಾರ್, ಕಾಲೇಜಿನ ವಿದ್ಯಾರ್ಥಿಗಳು ಅಲ್ಟ್ರಾ ಟೆಕ್ ಸಿಮೆಂಟ್ ಕಾರ್ಖಾನೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

