ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಗುತ್ತಿಗೆದಾರರು ಒಂದು ಕಡೆ ಬಾಕಿ ಬಿಲ್‌ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ಗುತ್ತಿಗೆದಾರರು ಬರಬೇಕಾದ 35 ಸಾವಿರ ಕೋಟಿ ಬಾಕಿ ಬಿಲ್‌ಗೆ ಕಾದು ಕೂತಿದ್ದಾರೆ ಎಂದು ಬಿಜೆಪಿ ಹೇಳಿದೆ.
ಡಿಕೆ ಶಿವಕುಮಾರ್‌ಅವರ ಬೆಂಗಳೂರು ನಗರಾಭಿವೃದ್ಧಿ ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿಯೇ ಬರೋಬ್ಬರಿ 17 ಸಾವಿರ ಕೋಟಿ ರೂ. ಬಿಲ್‌ಬಾಕಿ ಉಳಿಸಿಕೊಳ್ಳಲಾಗಿದೆ.
ಡಿ.ಕೆ.ಶಿವಕುಮಾರ್ ಅವರು ಬಾಕಿ ಬಿಲ್‌ನೀಡದೆ ಗುತ್ತಿಗೆದಾರರ ಬಳಿ ಡೀಲ್‌ಕುದಿರಿಸಲು ಕಾಯುತ್ತಿದ್ದರಾ ಎನ್ನುವ ಅನುಮಾನ ಕಾಡಿದೆ. ಗುತ್ತಿಗೆದಾರರು 7 ಇಲಾಖೆಗಳಿಗೆ ಪತ್ರ ಬರೆದು ಎಚ್ಚರಿಕೆ ನೀಡಿದರೂ ಯಾವುದೇ ಸಚಿವರು ಸ್ಪಂದಿಸುತ್ತಿಲ್ಲ. ಹೀಗಾಗಿ ಉಗ್ರ ಹೋರಾಟಕ್ಕೆ ಗುತ್ತಿಗೆದಾರರ ಸಂಘ ನಿರ್ಧರಿಸಿದೆ.

