ಗೃಹ ಖಾತೆಯನ್ನ ಸಮರ್ಥರಿಗೆ, ಆಸಕ್ತಿ ಉಳ್ಳವರಿಗೆ ಹಸ್ತಾಂತರ ಮಾಡಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕಡು ಭ್ರಷ್ಟ ಸರ್ಕಾರದಲ್ಲಿ ಅತ್ಯಂತ ದೊಡ್ಡ ಬ್ಯಾಂಕ್ ಲೂಟಿ! ಆಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.

ಸ್ವಾಮಿ ಸಿದ್ದರಾಮಯ್ಯ ನವರೇ, ಬ್ಯಾಂಕ್ ಲೂಟಿ, ಎಟಿಎಂ ವಾಹನ ದರೋಡೆ ಇವೆಲ್ಲ ಆಕಸ್ಮಿಕಘಟನೆಗಳೋ ಅಥವಾ ಅಮಾಯಕರು, ಮಾನಸಿಕ ಅಸ್ವಸ್ಥರು ಮಾಡಿರುವ ಪುಂಡಾಟಿಕೆಯೋ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.

- Advertisement - 

ಮುಖ್ಯಮಂತ್ರಿ ಆಗುವ ಕನಸು ಬಿದ್ದಿರುವ ಗೃಹ ಸಚಿವ ಡಾ.ಪರಮೇಶ್ವರ್ ಅವರಿಗೆ ಗೃಹ ಇಲಾಖೆಯ ಬಗ್ಗೆ ಆಸಕ್ತಿ ಇಲ್ಲ ಅಂತ ಕಾಣುತ್ತದೆ. ಕೂಡಲೇ ಅವರ ಖಾತೆ ಬದಲಾಯಿಸು ಗೃಹ ಖಾತೆಯನ್ನ ಯಾರಾದರೂ ಸಮರ್ಥರಿಗೆ, ಆಸಕ್ತಿ ಉಳ್ಳವರಿಗೆ ಹಸ್ತಾಂತರ ಮಾಡಿ ಎಂದು ಅವರು ತಾಕೀತು ಮಾಡಿದ್ದಾರೆ.

ಪರಿಸ್ಥಿತಿ ಹೀಗೆ ಮುಂದುವರೆದರೆ ರಾಜ್ಯದ ಜನತೆ ಧೈರ್ಯವಾಗಿ ಓಡಾಡುವುದೂ ಕಷ್ಟವಾಗಬಹುದು ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.

- Advertisement - 

 

Share This Article
error: Content is protected !!
";