ಎಸ್ಸಿ ಎಸ್ಟಿ ವರ್ಗಗಳ ಸ್ಥಿತಿಗತಿ ಕುರಿತು ಅಧ್ಯಯನ ಚರ್ಚೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕ್ಷೇಮಾಭಿವೃದ್ದಿ ಸಂಸದೀಯ ಸಮಿತಿಯ ಅಧ್ಯಯನ ಪ್ರವಾಸವು ದಿನಾಂಕ ೧೭
, ಜನವರಿಯಿಂದ ೨೨ ಜನವರಿಯವರೆಗೆ ರಾಂಚಿ, ಕೊಲ್ಕತ್ತಾ, ಮತ್ತು ರಾಯ್‌ಪುರದಲ್ಲಿ ಏರ್ಪಾಡಾಗಿದ್ದು, ಕೊಲ್ಕತ್ತಾದಲ್ಲಿ

ಇಂದು ನಡೆದ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ರವರು ಭಾಗವಹಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರಿಗೆ ವಿವಿಧ ಕಂಪನಿಗಳು/ ಇಲಾಖೆಗಳು ತಗೆದುಕೊಂಡಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಿದರು.

- Advertisement - 

  ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಧಿಕಾರಿಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿ, ಶಿಕ್ಷಣ, ಮೀಸಲಾತಿವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಮೀಸಲಾತಿ ಹೊಂದಿರುವ ಹುದ್ದೆಗಳ ಕುರಿತು ಸಭೆಯಲ್ಲಿ ಕೂಲಂಕುಶವಾಗಿ ಚರ್ಚಿಸಲಾಯಿತು.  

   ಫಗ್ಗನ್ ಸಿಂಗ್ ಕುಲಸ್ತೆ ಅವರು ಅಧ್ಯಕ್ಷತೆ ವಹಿಸಿದ ಈ ಸಭೆಯಲ್ಲಿ ಪೂರ್ವ ವಲಯ ರೈಲ್ವೆ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳುಕೋಲ್ ಇಂಡಿಯಾ ಕಂಪನಿಯ ಎಸ್ಸಿ ಎಸ್ಟಿ ಅಧಿಕಾರಿಗಳು, ಪಂಜಾಬ್ ನ್ಯಾಷನಲ್ ಬ್ಯಾಂಕಿನ ಎಸ್ಸಿ ಎಸ್ಟಿ ಅಧಿಕಾರಿಗಳು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಅನೇಕ ಹಿರಿಯ ಅಧಿಕಾರಿಗಳು ಹಾಗೂ ಸಮಿತಿಯ ಇತರೆ ಲೋಕಸಭಾ ಸದಸ್ಯರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

- Advertisement - 

 

 

Share This Article
error: Content is protected !!
";