Cyber Security and Internet Safty ಕುರಿತು ಕಾರ್ಯಾಗಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ Cyber Security and Internet Safty  ವಿಷಯದ ಕುರಿತು ಮೇಲೆ ಫೆಬ್ರವರಿ 05 ರಿಂದ 07ರ ವರೆಗೆ ಮೂರು ದಿನಗಳ ಕಾರ್ಯಾಗಾರವನ್ನು ಅಕಾಡೆಮಿಯ ಕಚೇರಿಯಲ್ಲಿ ಹಮ್ಮಿಕೊಳಲಾಗಿದೆ.

ಈ ಕಾರ್ಯಾಗಾರದಲ್ಲಿ Cyber Security and Internet Safty ಬಗ್ಗೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಆನ್‍ಲೈನ್ ವಂಚನೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳು ಮತ್ತು ಅಂತರ್ಜಾಲ ಸುರಕ್ಷತೆ ಉಪಯೋಗದ ಬಗ್ಗೆ ವಿವಿಧ ನುರಿತ ತಜ್ಞರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು.

- Advertisement - 

ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಪ್ರಾಧ್ಯಾಪಕರು ಭಾಗವಹಿಸಬಹುದಾಗಿದ್ದು, ಆಸಕ್ತರು 2025ನೇ ಜನವರಿ 31ರ ಒಳಗಾಗಿ Google form https://forms.gle/9fds6N5vjzLpjNGX7  ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ. ನೊಂದಣಿ ಶುಲ್ಕ ರೂ 2000/-ಗಳನ್ನು ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶ್ರೀನಿವಾಸು ವಿ.ಕೆ. ಮೊ.ಸಂ: 9620767819ನ್ನು ಅಥವಾ ಸ್ಥಿರ ದೂರವಾಣಿ ಸಂ. 29721550 ಸಂಪರ್ಕಿಸಬಹುದು. ಅಥವಾ ಅಕಾಡೆಮಿಯ ವೆಬ್ ಸೈಟ್ https://:kstacademy.in ವೀಕ್ಷಿಸಬಹುದಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ. ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 

 

Share This Article
error: Content is protected !!
";