ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಣಂತಿಯರ ಕೊಲೆಗಾರ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಓಲೈಕೆ ಆಡಳಿತದಲ್ಲಿ ಗರ್ಭ ಧರಿಸಿದ ಹಸುಗಳಿಗೂ ರಕ್ಷಣೆಯಿಲ್ಲ!! ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.
ಹೊನ್ನಾವರದಲ್ಲಿ ತುಂಬು ಗರ್ಭವತಿಯಾಗಿದ್ದ ಹಸುವನ್ನು ಕೊಂದು, ಅದರೊಳಗಿನ ಕರುವಿನ ತಲೆ ಕತ್ತರಿಸಿರುವುದು ಅತ್ಯಂತ ಪೈಶಾಚಿಕ ಕೃತ್ಯ.
ಸಿಎಂ ಸಿದ್ದರಾಮಯ್ಯ ಅವರೆ, ನಿಮ್ಮ ಆಡಳಿತದಲ್ಲಿ ಹಿಂದೂಗಳಿಗೆ ಹಾಗೂ ಹಿಂದೂಗಳು ಸಾಕುವ ಪ್ರಾಣಿಗಳಿಗೇಕೆ ಈ ಪರಿ ಶಿಕ್ಷೆ..??
ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೆ, ಹಸು ಕೊಲೆಗಡುಕರನ್ನು ಬಂಧಿಸುತ್ತಿರೋ ಅಥವಾ ಅವರಿಗೆ ಮಾನಸಿಕ ಅಸ್ವಸ್ಥ ಪಟ್ಟಕಟ್ಟುತ್ತಿರೋ..?? ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.

