ಪತ್ರಕರ್ತರ ಯಶಸ್ವಿ ಸಮ್ಮೇಳನ, ಅಭಿನಂದನೆ ಸಲ್ಲಿಸಿದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು  

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲ್ಪತರ ನಾಡು ತುಮಕೂರಿನಲ್ಲಿ ಜ.18 ಮತ್ತು 19ರಂದು ಎರಡು ದಿನಗಳ ಕಾಲ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ವು ಸಂಘಟಿಸಿದ್ದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಯಶಸ್ವಿ ಮತ್ತು ಅರ್ಥಪೂರ್ಣವಾಗಿ ನಡೆಯಲು ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆಗಳನ್ನು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ರೂಪದಲ್ಲಿಯೇ ಪತ್ರಕರ್ತರ ಸಮ್ಮೇಳನ ನಡೆಯಬೇಕು ಎನ್ನುವುದು ರಾಜ್ಯ ಸಂಘದ ನಿರೀಕ್ಷೆ ಮತ್ತು ಆಶಯ. ಈ ನಿಟ್ಟಿನಲ್ಲಿ ಸತತ ಪ್ರಯತ್ನಗಳು ನಡೆಯುತ್ತಾ ಬಂದಿದ್ದರೂ, ಅದಕ್ಕೆ ಮೂರ್ತ ರೂಪ ಸಿಕ್ಕಿದ್ದು ಮಾತ್ರ ತುಮಕೂರಿನಲ್ಲಿ. ಕೆಯುಡಬ್ಲೂಜೆ ತುಮಕೂರು ಜಿಲ್ಲಾ ಘಟಕದ ಅವಿರತ ಹೋರಾಟ ಮತ್ತು ಶ್ರಮಕ್ಕೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ.

- Advertisement - 

ಸಮ್ಮೇಳನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ, ಪತ್ರಕರ್ತರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಮಂಡಿಸಿ, ಸರ್ಕಾರದ ಗಮನ ಸೆಳೆಯುವಲ್ಲಿ ಸಂಘ ಯಶಸ್ವಿಯಾಗಿ ದಿಟ್ಟ ಹೆಜ್ಜೆ ಇಟ್ಟ ಪರಿಣಾಮವಾಗಿಯೇ ಮುಖ್ಯಮಂತ್ರಿಗಳು, ಅದೇ ವೇದಿಕೆಯಲ್ಲಿ ಬೇಡಿಕೆಗಳಿಗೆ ಸ್ಪಂಧಿಸಲು ಸಾಧ್ಯವಾಗಿದ್ದು. ಪತ್ರಕರ್ತರ ಕುಟುಂಬಕ್ಕೆ ಹೆಲ್ತ್ ಸ್ಕೀಂ ಘೋಷಣೆ ಮಾಡಿದ್ದು ಎನ್ನುವುದು ನಿಜಕ್ಕೂ ಸಂತಸದ ಸಂಗತಿ.

ಹತ್ತು ಹಲವು ವೈರುಧ್ಯಗಳ ನಡುವೆ ಸಮ್ಮೇಳನವನ್ನು ಸಂಘಟಿಸಿದ್ದ ರಾಜ್ಯ ಸಂಘಕ್ಕೂ ಈ ಎಲ್ಲಾ ಬೆಳವಣಿಗೆಗಳು ಹೆಗ್ಗಳಿಕೆ ಸಂಗತಿಯೇ ಆಗಿದೆ.

- Advertisement - 

ಸಮ್ಮೇಳನ ಅಂದರೆ, ಅದೊಂದು ಮಾಧ್ಯಮದ ಹಬ್ಬ, ಪತ್ರಕರ್ತರ ಸಂಭ್ರಮ, ಸಡಗರದ ಸಮ್ಮಿಲನವಷ್ಟೆ ಅಲ್ಲ, ಅದೊಂದು ವಿಚಾರ ಸಂಘರ್ಷಕ್ಕೆ ವೇದಿಕೆ ಆಗಬೇಕು ಎನ್ನುವದು ಕೂಡ ಸಾಕಾರಗೊಮಡಿದೆ.

ಸಮ್ಮೇಳನದಲ್ಲಿ ಮಾಧ್ಯಮ-ಮಂಥನ ಆಗಬೇಕು ಎಂದು ನಾಲ್ಕು ಗೋಷ್ಠಿ ಮತ್ತು ಒಂದು ಉಪನ್ಯಾಸ ಏರ್ಪಡಿಸಲಾಗಿತ್ತು. ಅಷ್ಟೂ ಗೋಷ್ಠಿಗಳು ಅಚ್ಚುಟ್ಟಾಗಿ, ಅರ್ಥಪೂರ್ಣವಾಗಿ ನಡೆದಿದ್ದು ವಿಶೇಷ. ಇದೆಲ್ಲವೂ ಸಮ್ಮೇಳನದ ಮೌಲ್ಯವನ್ನು ಹೆಚ್ಚಿಸಿದ್ದು ಸಾರ್ಥಕ.

ತುಮಕೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಚಿ.ನೀ.ಪುರುಷೋತ್ತಮ ನೇತೃತ್ವದಲ್ಲಿ ಸಮ್ಮೇಳನಕ್ಕಾಗಿ ದುಡಿದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ತಾಲೂಕು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಸದಸ್ಯರಿಗೂ ಧನ್ಯವಾದಗಳನ್ನು ಅವರು ತಿಳಿಸಿದ್ದಾರೆ.

ನಾಡಿನ ಉದ್ದಗಲಕ್ಕೂ ಎಲ್ಲಾ ಜಿಲ್ಲೆ ಮತ್ತು ತಾಲೂಕು ಹಾಗೂ ಹೋಬಳಿ ಕೇಂದ್ರದಿಂದಲೂ ನಮ್ಮದೇ ಸಮ್ಮೇಳನ ಎಂದು ಅಭಿಮಾನದಿಂದ ಬಂದು ಸಮ್ಮೇಳನದಲ್ಲಿ ಭಾಗಿಯಾದ ಎಲ್ಲರಿಗೂ ಅಭಿವಂದನೆಗಳನ್ನು ಹೇಳಿದ್ದಾರೆ.

ನಮ್ಮದೇ ಸಮ್ಮೇಳನ ಯಶಸ್ವಿಯಾಗಬೇಕು ಎಂದು ಹಗಲಿರಳು ದುಡಿದವರಿಗೂ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು
ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Share This Article
error: Content is protected !!
";