ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರುನಾಡನ್ನು ಲೂಟಿಕೋರ ಕರ್ನಾಟಕ ಕಾಂಗ್ರೆಸ್ ಸರ್ಕಾರ ದರೋಡೆ ನಾಡನ್ನಾಗಿ ಪರಿವರ್ತನೆ ಮಾಡಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದ್ದಾರೆ.
ಹೊಸ ವರ್ಷಕ್ಕೆ ಗ್ರಾಹಕರಿಗೆ ಕಂಪನಿಗಳು ಆಫರ್ಕೊಟ್ಟಂತೆ ದರೋಡೆಕೋರರಿಗೆ ಕರ್ನಾಟಕವನ್ನು ಲೂಟಿ ಮಾಡಲು ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಆಫರ್ಕೊಟ್ಟು ನಿದ್ದೆಗೆ ಜಾರಿದೆ ಎಂದು ಬಿಜೆಪಿ ಹರಿಹಾಯ್ದಿದೆ.
ಬೀದರ್, ಮಂಗಳೂರು, ಮೈಸೂರು, ಹುಬ್ಬಳ್ಳಿ ಬಳಿಕ ಇದೀಗ ಯಾದಗಿರಿಯಲ್ಲೂ ದರೋಡೆಕೋರರು ಲೂಟಿ ಮಾಡಲು ಬೀದಿಗೆ ಇಳಿದಿದ್ದಾರೆ. ಕನ್ನಡಿಗರೇ ನಿಮ್ಮ ಜಿಲ್ಲೆಗೂ ದರೋಡೆಕೋರರು ಬರಬಹುದು ಎಚ್ಚರವಾಗಿರಿ ಎಂದು ಬಿಜೆಪಿ ಸಾರ್ವಜನಿಕರನ್ನು ಎಚ್ಚರಿಸಿದೆ.
ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ದರೋಡೆಕೋರರಿಗೆ ಮಾನಸಿಕ ಅಸ್ವಸ್ಥ ಪಟ್ಟ ಕಟ್ಟಲು “ಸಿದ್ಧ”ರಾಗಿದ್ದಾರೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

