ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರಶುರಾಂಪುರ ಹೋಬಳಿ ಯನ್ನು ತಾಲೂಕ್ ಕೇಂದ್ರವನ್ನಾಗಿ ಮಾಡಲು ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ದ ಪದಾಧಿಕಾರಿಗಳು ಮತ್ತು ಅಧ್ಯಕ್ಷರು ಕಿಸಾನ್ ಘಟಕ ಚಿತ್ರದುರ್ಗ ಜಿಲ್ಲೆ, ಇವರ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಪರಶುರಾಂಪುರ ಕೇಂದ್ರವು ಭೌಗೋಳಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಎಲ್ಲಾ ಸವಲತ್ತುಗಳನ್ನು ಹೊಂದಿದ್ದು ತಾಲೂಕ್ ಕೇಂದ್ರವಾಗಿ ಮಾಡಲು ಅರ್ಹ ವಾಗಿರುತ್ತದೆ, ಹಾಗೆ ಈಗಾಗಲೇ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ರವರು ಮೂರ್ನಾಲ್ಕು ಬಾರಿ ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದು ತಾಲೂಕ್ ಕೇಂದ್ರವನ್ನಾಗಿ ಮಾಡಲು ಬಹಳ ಆಸಕ್ತಿದಾಯಕ ರಾಗಿದ್ದಾರೆ, ಆದ್ದರಿಂದ ಪರಶುರಾಂಪುರ ತಾಲೂಕ್ ಕೇಂದ್ರವನ್ನಾಗಿ ಮುಂಬರುವ ಸದನದಲ್ಲಿ ಘೋಷಣೆ ಮಾಡಬೇಕಾಗಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷ ಮತ್ತು ಜಿಲ್ಲಾ ಕಿಸಾನ್ ಘಟಕ ಅಧ್ಯಕ್ಷರಾದ ನಾಗರಾಜ್ ಎ ಪರಶುರಾಮಪುರ ಒತ್ತಾಯಿಸಿದ್ದಾರೆ.
ಈ ಒಂದು ಸುಸಂದರ್ಥಕ್ಕೆ ಇಂಥ ಅವಕಾಶ ಎಡೆಮಾಡಿ ಕೊಟ್ಟಂತಹ ಮತ್ತು ಯಾವಾಗಲೂ ರೈತರಹಿತ ಕಾಪಾಡು ಕಾಪಾಡುವಂತಹ ದಕ್ಷ ಅಧಿಕಾರಿಗಳು ವಿಶ್ವೇಶ್ವರ ಜಲ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ ಆದಂತಹ ಸಣ್ಣ ಚಿತ್ತಯ್ಯನವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಅವರಿಗೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಿಸಾನ್ ಘಟಕದ ವತಿಯಿಂದ ತುಂಬು ಹೃದಯದ ಧನ್ಯವಾದಗಳು ತಿಳಿಸಿದ್ದಾರೆ.

