ಚಂದ್ರವಳ್ಳಿ ನ್ಯೂಸ್ ಹಿರಿಯೂರು :
ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾoಕ್ ನಿಯಮಿತದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಜನ ಅವಿರೋಧವಾಗಿ ಆಯ್ಕೆಯಾಗಿದ್ದು ಮೂವರು ಚುನಾವಣೆಗೆ ಸ್ಪರ್ದಿಸಿ ಚುನಾಯಿತರಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರು : ಸಾಲಗಾರರ ಕ್ಷೇತ್ರದಿಂದ ಗೌನಹಳ್ಳಿ ಮಲ್ಲನಾಯ್ಕ, ಕುರುಬರಹಳ್ಳಿ ಮಂಜನಾಯ್ಕ, ಹಿರಿಯೂರು ಅಂಬುಜಮ್ಮ, ಕಂಬತ್ತನಹಳ್ಳಿ ಮಲ್ಲಿಕಾರ್ಜುನಯ್ಯ, ರಂಗೇನಹಳ್ಳಿ ಕೆ ಶಂಕರಮೂರ್ತಿ, ಕಳವಿಬಾಗಿ ಕೃಷ್ಣಯ್ಯ, ಎಂ ಡಿ ಕೋಟೆ ತಿಪ್ಪೇಸ್ವಾಮಿ, ಕಳವಿಬಾಗಿ ಆರ್ ಮನೋಹರ್, ರಂಗನಾಥಪುರ ಲಕ್ಷ್ಮಿದೇವಿ, ಹಿಂಡಸಕಟ್ಟೆ ಕಮಲಮ್ಮ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಹಿರಿಯೂರು ತಾಲೂಕಿಗೆ ಸಾದತ್ ಉಲ್ಲಾ ಆಯ್ಕೆಯಾಗಿದ್ದಾರೆ.
ಚುನಾವಣೆ ನಡೆದ ಮೂರು ನಿರ್ದೇಶಕರ ಸ್ಥಾನಕ್ಕೆ ಬ್ಯಾಡರಹಳ್ಳಿ ಕ್ಷೇತ್ರಕ್ಕೆ ಎಸ್ ಜೆ ಹನುಮಂತರಾಯ, ಚಿಲ್ಲಹಳ್ಳಿ ಪಿ ಎಲ್ ಶಿವಣ್ಣ ಹಾಗೂ ಆದಿವಾಲ ಕ್ಷೇತ್ರಕ್ಕೆ ಎಸ್ ಗಿರಿಜಪ್ಪನವರು ಚುನಾಯಿತರಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಸಹಕಾರ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

