ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮ್ಮ ಕಚೇರಿ ನವೀಕರಣ ಮತ್ತು ಹೊಸ ಗೂಟದ ಕಾರು ಖರೀದಿಗೆ ಕೋಟಿ ಕೋಟಿ ಖರ್ಚು ಮಾಡುವ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಕರ್ನಾಟಕದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದ ಖೋ ಖೋ ವಿಶ್ವವಿಜೇತರಿಗೆ ಕೇವಲ 5 ಲಕ್ಷ ರೂ. ನೀಡಿ ಕೈ ತೊಳೆದುಕೊಂಡಿದೆ ಎಂದು ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರ ಆದೇಶಕ್ಕೆ ಮಣಿದು ಕೇರಳಕ್ಕೆ ಕೋಟಿ ಕೋಟಿ ಹಣ ನೀಡುವ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಸಾಧಕರಿಗೆ ಮಾತ್ರ ಪುಡಿಗಾಸು ನೀಡಿ ಅವಮಾನಿಸುತ್ತಿದೆ.
ಸರ್ಕಾರದ ನಡೆಗೆ ಸ್ವಂತಃ ಖೋ ಖೋ ಸಂಸ್ಥೆಯ ಪದಾಧಿಕಾರಿಗಳು ಆಕ್ರೋಶ ಹೊರ ಹಾಕಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

