ಬಿಜೆಪಿಯಲ್ಲಿ ಅಧ್ಯಕ್ಷ ಕುರ್ಚಿಗೆ ಇನ್ನಿಲ್ಲದ ಪೈಪೋಟಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿಯಲ್ಲಿ ಅಧ್ಯಕ್ಷ ಕುರ್ಚಿಗೆ ಇನ್ನಿಲ್ಲದ ಪೈಪೋಟಿ ಶುರುವಾಗಿದ್ದು
, ಬಿವೈ ವಿಜಯೇಂದ್ರಗೆ ಠಕ್ಕರ್ ಕೊಡಲು ಬಸನಗೌಡ ಯತ್ನಾಳ್ ಟೀಮ್ ಸಜ್ಜಾಗಿದೆ! ಎಂದು ಕಾಂಗ್ರೆಸ್ ಟೀಕಿಸಿದೆ.

ವಿಜಯೇಂದ್ರ ಅಧ್ಯಕ್ಷ ಪಟ್ಟ ಅಲಂಕರಿಸಿದ ಕ್ಷಣದಿಯಲೇ ಕಮಲ ಪಾಳಯದಲ್ಲಿ ಕೊಂಕು ಮಾತನಾಡುವ ನಾಯಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಬಂದಿದೆ. ಈ ಅತೃಪ್ತರೆಲ್ಲರೂ ಒಟ್ಟಾಗಿ ಸೇರಿಕೊಂಡು ಯಡಿಯೂರಪ್ಪನವರ ಮಗನನ್ನು ಎಳಸು, ಬಚ್ಚಾ, ನಾಲಾಯಕ್ ಎಂದೆಲ್ಲಾ ಹೀಯಾಳಿಸಿ ಬಣ ಕಟ್ಟಿಕೊಂಡು ಅಧ್ಯಕ್ಷ ಕುರ್ಚಿಯನ್ನು ಅಲುಗಾಡಿಸುತ್ತಿದ್ದಾರೆ. ಇದರಲ್ಲಿ ಯತ್ನಾಳ್ ಬಣ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕಾಂಗ್ರೆಸ್ ತಿಳಿಸಿದೆ.

- Advertisement - 

ಒಡೆದ ಮನೆಯ ಯಜಮಾನಿಕೆಗಾಗಿನ ಕಚ್ಚಾಟದಲ್ಲಿ ಕಮಲದ ದಳಗಳು ಉದುರಿ ನೂರು ಭಾಗಗಳಾಗಿದ್ದು, ಅಧ್ಯಕ್ಷ ಚುನಾವಣೆಯಷ್ಟರಲ್ಲಿ ಮತ್ತಷ್ಟು ಮನೋರಂಜನೆ ಖಚಿತ! ಎಂದು ಕಾಂಗ್ರೆಸ್ ಭವಿಷ್ಯ ನುಡಿದಿದೆ.

 

- Advertisement - 

 

Share This Article
error: Content is protected !!
";