ನಿರಂಬಾರಿ ತೊಟ್ಟಿಲು

News Desk

ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ನಿರಂಬಾರಿ ತೊಟ್ಟಿಲು
ಆ ಋತುವಿನೊಳು ಕೋಗಿಲೆ ಹಾಡಿದರೆ
ಮಧುರ
ಮಮತೆಯ ಹಾಲಿಲ್ಲದ ಎದೆ!
ತಾಯ ಕರುಳಿಲ್ಲದ ಒಡಲು
ಹಾಡಿದೊಡೆ ಬಂದದ್ದೇನು ಪುಣ್ಯ ಫಲ,?
ಕವಿಗಳು ಹಾಡಿ ಹೊಗಳಿದರೇನು??
ಧ್ವನಿ ಮಿಗಿಲೆಂದಾಡುವ ವಸಂತದೂತನ
ಮಾನವೀಯತೆ ಮರೆತ ಪರಪುಟ್ಟನ,! 

ಅಂತ:ಕರಣದಿ ನೆರೆ ಮಗುವ ಪೊರೆವ
ಕಾಗೆಯದು ಮಮಕಾರದ ಮಡಿಲು
ಕರೆ ತಾಯಿಯ ಒಡಲು!
ತಲೆಗಿಟ್ಟ ಪಿಂಡವ ಮುಟ್ಟಿ
ಶತಾಯುಷಿಗೆ ಮುಕ್ತಿ ಕೊಡುವುದಾದರೆ
ಶಕುನ- ಅಪಶಕುನದ ಮಾತುಗಳೇಕೆ?
ಕಾಗೆ ಚಿರಂಜೀವಿ ಎನದೆ ಬರೆಯಬಹುದೇ ಕವಿ.!?
ಕವಿತೆ-ಅಜ್ಜೇರಿ ತಿಪ್ಪೇಸ್ವಾಮಿ, ಮೊಳಕಾಲ್ಮೂರು.

- Advertisement - 

Share This Article
error: Content is protected !!
";