ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜು ದೊಡ್ಡಬಳ್ಳಾಪುರ ಕಾಲೇಜು ಮಟ್ಟದ “ರಂಗೋಲಿ ಸ್ಪರ್ಧೆಯನ್ನು “ಶ್ರೀ ಚೈತನ್ಯ ರಾಮಕೃಷ್ಣ ಫೌಂಡೇಷನ್” ವತಿಯಿಂದ ಏರ್ಪಡಿಸಲಾಗಿತ್ತು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಪ್ರಾಂಶುಪಾಲ ಎಂ. ಸಿ. ಮಂಜುನಾಥ್ ಆಧುನಿಕ ಯುಗ ಕಂಪ್ಯೂಟರ್ ಯುಗವಾಗಿದ್ದು ಇಂದಿನ ಯುವ ಪೀಳಿಗೆ ಗ್ರಾಮೀಣ ಭಾಗದ ಕಲೆ ಸಂಸ್ಕೃತಿ ಆಚಾರ ವಿಚಾರಗಳನ್ನು ಮರೆಯುತ್ತಿದ್ದಾರೆ ನಮ್ಮ ಹಿರಿಯರು ಮನೆಯ ಬಾಗಿಲಲ್ಲಿ ಸಗಣಿಯಿಂದ ಸಾರಿಸಿ ವಿವಿಧ ಬಗೆಯ ರಂಗೋಲಿ ಹಾಕುತ್ತಿದ್ದರು ಇದನ್ನು ನೊಡಲು ತುಂಬಾ ಸಂತೋಷವಾಗುತಿತ್ತು.
ಆದರೆ ಈಗ ಬಹುತೇಕ ಜನರು ನಗರಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುತಿದ್ದು ಯಾಂತ್ರಿಕ ಜೀವನ ಶೈಲಿಗೆ ಮಾರು ಹೋಗಿದ್ದಾರೆ ಹೀಗಾಗಿ ಇಂದಿನ ವಿದ್ಯಾರ್ಥಿಗಳಿಗೆ ಯುವ ಜನಾಂಗದವರಿಗೆ ಗ್ರಾಮೀಣ ಕ್ರೀಡೆ ಗ್ರಾಮೀಣ ಸಂಸ್ಕೃತಿ ಕಲೆಗಳ ಬಗ್ಗೆ ಶಾಲಾ ಕಾಲೇಜು ಹಂತದಲ್ಲಿ ಅದರ ಮಹತ್ವ ಬಗ್ಗೆ ಅರಿವು ಮೂಡಿಸಿದರೆ ಇಂತಹ ರಂಗೋಲಿಯಂತಹ ಗ್ರಾಮೀಣ ವೈಭವ ಮತ್ತೆ ಮರುಕಳಿಸಬಹುದು ಎಂದು ಹೇಳಿದರು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಪದಕ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಪ್ರಥಮ ಪಿಯುಸಿ ವಿಭಾಗದಲ್ಲಿ ವಿಜೇತರು-
ಪ್ರಥಮ ಸ್ಥಾನ “ಅರ್ಚನಾ ಮತ್ತು ತಂಡ” ವಾಣಿಜ್ಯ ವಿಭಾಗ, ದ್ವಿತೀಯ ಸ್ಥಾನ “ಕಾವ್ಯ ಮತ್ತು ತಂಡ “ವಿಜ್ಞಾನ ವಿಭಾಗ, ತೃತೀಯ ಸ್ಥಾನ”ದೀಪ್ತಿ ಮತ್ತು ತಂಡ “ವಿಜ್ಞಾನ ವಿಭಾಗ, “ದ್ವಿತೀಯ ಪಿಯುಸಿ ವಿಭಾಗದಲ್ಲಿ” ಪ್ರಥಮ ಸ್ಥಾನ”ಲಯ. ಡಿ. ಮತ್ತು ಸಾತ್ವಿಕ ವಿಜ್ಞಾನ ವಿಭಾಗ, ದ್ವಿತೀಯ ಸ್ಥಾನ”ಪ್ರತೀಕ್ಷಾ ವಾಣಿಜ್ಯ ವಿಭಾಗ,
ತೃತೀಯ ಸ್ಥಾನ”ಐಶ್ವರ್ಯ ವಾಣಿಜ್ಯ ವಿಭಾಗ.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕ “ಪುನೀತ್ ಟಿ” ಉಮ್ಮೆಮುಸ್ಕಾನ್ ” ಪಲ್ಲವಿ ಎಸ್ “ಶ್ರೀ ಕೃಷ್ಣಚೈತನ್ಯ “ಕೆ ವಿ ಸೌಮ್ಯಶ್ರಿ ಹಾಗೂ ಪ್ರಥಮ ದ್ವಿತೀಯ ಪಿಯುಸಿ ವಾಣಿಜ್ಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

