ಬಹುಮುಖ ಪ್ರತಿಭೆಯ ಶಿಕ್ಷಣ ಶಿಲ್ಪಿ ಡಾ.ವೊಡೇ ಕೃಷ್ಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಾ. ವೂಡೇ ಪಿ ಕೃಷ್ಣ ರಾಜ್ಯಮಟ್ಟದ ಗಾಂಧಿ ಸ್ಮಾರಕ ನಿಧಿಯ ಅದ್ಯಕ್ಷರು. ಶಿಕ್ಷಣ ತಜ್ಞರು. ಬರಹಗಾರರು ಹಾಗೂ ಉತ್ತಮ ವಾಗ್ಮಿಗಳು ಹೌದು. ಇವರ ಜನ್ಮದಿನವಾದ ಫೆಬ್ರವರಿ
1ರ ಇಂದು ಅವರ ಸಾಮಾಜಿಕ ನೀತಿಯನ್ನು ಸಮಾಜಕ್ಕೆ ವಿವರಿಸುತ್ತೇನೆ. ವೂಡೇ ಪಿ ಕೃಷ್ಣ ಅವರು ಬೆಂಗಳೂರಿನವರಾದರು ಇವರ ಪೂರ್ವಜರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಡೆವೂಡೇ ಗ್ರಾಮದವರು. ಇವರ ಪೂರ್ವಜರು ಸರಿ ಸುಮಾರು 200 ವರ್ಷಗಳ ಹಿಂದೆ ಬೆಂಗಳೂರಿಗೆ ತೆರಳಿ ವ್ಯಾಪಾರ ನೀತಿಯಲ್ಲಿ ಹಂತಹಂತವಾಗಿ ಬೆಳೆದಿರುವುದು ಒಂದು ಇತಿಹಾಸ.

ವೂಡೇ ಕುಟುಂಬದ ಹೆಸರಿನಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಗುರುತ್ತಿಸಿಕೊಂಡ ಇವರ ಪೂರ್ವಜರು ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದಾರೆ. ವೂಡೇ ಪಿ ಕೃಷ್ಣ ಅವರ ಅಜ್ಜ ಸ್ವಾತಂತ್ರ ಪೂರ್ವದಲ್ಲಿ ಮೈಸೂರು ಸಂಸ್ಥಾನದ ರಾಜ ಮನೆತನದ ಆಡಳಿತದಲ್ಲಿ ಪ್ರಜಾಪ್ರತಿನಿಧಿ ಸಭೆಗೆ ಸದಸ್ಯರಾಗಿದ್ದರು. ವೂಡೇ ಪಿ ಕೃಷ್ಣ ಅವರ ದೊಡ್ಡಪ್ಪ ಡಬ್ಲ್ಯೂ ಎಚ್ ಹನುಮಂತಪ್ಪನವರು ಬೆಂಗಳೂರಿನ ಪ್ರಥಮ ಕಾರ್ಪೋರೇಶನ್ ಆಡಳಿತಕ್ಕೆ ಮೊದಲ ಮೇಯರ್ ಎಂಬ ವಿಚಾರ ಇತಿಹಾಸ ಪುಟಗಳಲ್ಲಿ ಗೌರವವನ್ನು ಪಡೆದುಕೊಂಡಿದೆ. ಹಲವು ವರ್ಷಗಳ ಹಿಂದೆಯೇ ಬೆಂಗಳೂರಿನ ಗಾಂಧಿನಗರದ 5ನೇ ಮುಖ್ಯ ರಸ್ತೆಗೆ ಡಬ್ಲ್ಯೂ ಎಚ್ ಹನುಮಂತಪ್ಪನವರ ಹೆಸರು ನಾಮಕರಣ ಮಾಡಲಾಗಿದೆ ಇದು ವೂಡೇ ಮನೆತನದ ಘನತೆಯ ಪ್ರತಿರೂಪ.

- Advertisement - 

ವೂಡೇ ಪಿ ಕೃಷ್ಣ ಅವರು ಮೈಸೂರಿನ ರಾಮಕೃಷ್ಣಾಶ್ರಮದ ವಿದ್ಯಾಪೀಠದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಪಡೆದಿದ್ದಾರೆ. ಎಂಜಿನಿಯರಿಂಗ್ ಹಾಗೂ ಕಾನೂನು ವಿಭಾಗದಲ್ಲಿ ಪದವಿ ಪಡೆದಿರುವ ಇವರು ಇಂಜಿನಿಯರಿಂಗ್ ವಿಭಾಗದಲ್ಲಿ ಉನ್ನತ ವಿದ್ಯಾಭ್ಯಾಸದ ಪದವಿ ಪಡೆಯಲು ಅಮೇರಿಕ ಹಾಗೂ ಕೆನಡಾ ದೇಶಕ್ಕೆ ಹೋಗಿದ್ದರು. ವೊಡೇ ಪಿ ಕೃಷ್ಣ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಎಮಿನೆಂಟ್ ಮೆಕ್ಯಾನಿಕಲ್ ಇಂಜಿನಿಯರ್ ರಾಷ್ಟ್ರೀಯ ಪ್ರಶಸ್ತಿ, ರಾಜ್ಯ ಯುವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿನಾಡೋಜ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಇನ್ನು ಹಲವು ದೇಶ ವಿದೇಶಗಳ ಪ್ರಶಸ್ತಿಗಳು ಇವರಿಗೆ ಲಭಿಸಿವೆ.

 ಮಹಾತ್ಮ ಗಾಂಧಿ ಹಾಗೂ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಿರುವ ವೂಡೇ ಪಿ ಕೃಷ್ಣ ಅವರ ಬದುಕಿನ ಸರಳ ಸಜ್ಜನಿಕೆ ಆದರ್ಶಪ್ರಾಯ. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗೆ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

- Advertisement - 

 ವೂಡೇ ಪಿ ಕೃಷ್ಣ ಅವರ ಜನ್ಮಸಂಭ್ರಮದ ನೆನಪಿನಲ್ಲಿ ಜಾಂಬವ ಶ್ರೀ ಗಂಗಾಧರ್ ರಚಿಸಿರುವ ಆಡು ಮುಟ್ಟದ ಸೊಪ್ಪಿಲ್ಲ ನಾಡೋಜ ಡಾ ವೂಡೇ ಪಿ ಕೃಷ್ಣ ಗ್ರಂಥವನ್ನು ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಗುವುದು ಮೇಲಿನ ಪೋಸ್ಟ್ ನಲ್ಲಿ ಸಂಪೂರ್ಣ ವಿವರಣೆ ವಿವರಿಸಲಾಗಿದೆ.

ಸ್ಥಳ-ಗಾಂಧಿ ಭವನ ಶಿವಾನಂದ ವೃತ್ತ ಬೆಂಗಳೂರು. 122025ರ ಶನಿವಾರ ಸಂಜೆ 5 ಗಂಟೆಗೆ ಎಂದು ರಘು ಗೌಡ ತಿಳಿಸಿದ್ದಾರೆ.

 

Share This Article
error: Content is protected !!
";