ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಮಧ್ಯಮ ವರ್ಗಕ್ಕೆ ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಮಹತ್ವದ ಘೋಷಣೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಈ ವಿಷಯ ಪ್ರಸ್ತಾಪ ಮಾಡಿ ವೈಯಕ್ತಿಕ ಆದಾಯ ತೆರಿಗೆದಾರರು 12 ಲಕ್ಷ ಆದಾಯ ಹೊಂದಿದ್ದರೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ.
ಇದರಿಂದ 12 ಲಕ್ಷದವರೆಗೂ ಆದಾಯ ಹೊಂದಿರುವರಿಗೆ ವಾರ್ಷಿಕವಾಗಿ 80 ಸಾವಿರ ರೂಪಾಯಿ ಉಳಿತಾಯವಾಗಲಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
12 ಲಕ್ಷದ ಆದಾಯ ತೆರಿಗೆ ರಿಯಾಯಿತಿ ಹೊಸ ತೆರಿಗೆ ನೀತಿಗೆ ಅನ್ವಯಿಸುತ್ತದೆ. ಆದರೆ ಹಳೆ ಪದ್ಧತಿಯಂತೆ ಆದಾಯ ತೆರಿಗೆ ಪಾವತಿದಾರರಿಗೂ ಸ್ಲ್ಯಾಬ್ ಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಆದಾಯ ತೆರಿಗೆ ಸ್ಲ್ಯಾಬ್-
ಹಳೆ ತೆರಿಗೆ ಸ್ಲ್ಯಾಬ್ ಹೀಗಿದೆ-
4,00,000 ಲಕ್ಷದ ವರೆಗೆ ಯಾವುದೇ ತೆರಿಗೆ ಇಲ್ಲ. 4,00,000ರೂ. ದಿಂದ 8,00,000 ರೂ -ಶೇ 5, 8,00,0001 ರೂ – 12,00,000ರೂ. – ಶೇ1012,00,001 ದಿಂದ 16 ಲಕ್ಷದವರೆಗೆ – ಶೇ 15, 16,00,001 ದಿಂದ 20 ಲಕ್ಷ ರೂ – ಶೇ 20 ರಷ್ಟು ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಮುಂದುವರೆದು 20,00,001 ದಿಂದ 24ಲಕ್ಷದವರೆಗೆ ಶೇ 25%, 24 ಲಕ್ಷದ ಮೇಲ್ಪಟ್ಟು – ಶೇ 30ರಷ್ಟು ತೆರಿಗೆ ಕಟ್ಟಲಾಗುತ್ತಿತ್ತು.
ಈ ಮೊದಲು ಹಳೆ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ಮಿತಿ 2,50,000 ಲಕ್ಷದವರೆಗೂ ಯಾವುದೇ ತೆರಿಗೆ ಇರಲಿಲ್ಲ. ಆದರೆ 2,50,001 ದಿಂದ 5,00,000 ರೂವರೆಗೂ ಶೇ5 ರಷ್ಟು ತೆರಿಗೆ ಇತ್ತು. ಅದನ್ನೀಗ ಬದಲಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

