ಚರ್ಮೊದ್ಯಮ ಯೋಜನೆಯಡಿ 22 ಲಕ್ಷ ಉದ್ಯೋಗ ಸೃಷ್ಠಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ನವದೆಹಲಿ:
2025-26ರ ಕೇಂದ್ರ ಬಜೆಟ್ ನಲ್ಲಿ ಚರ್ಮೊದ್ಯಮ ಯೋಜನೆಯಡಿ ಕೇಂದ್ರ ಸರ್ಕಾರ 22 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಪ್ರಕಟಿಸಿದ್ದಾರೆ.

ಕೇಂದ್ರ ಸರ್ಕಾರವು ಪಾದರಕ್ಷೆ ಮತ್ತು ಚರ್ಮೊದ್ಯಮ ಬೆಂಬಲಿಸಲು ಲೆದರ್​ ಸ್ಕೀಮ್​ ಯೋಜನೆ ಜಾರಿಗೆ ತರಲಿದೆ. ಜೊತೆಗೆ ಉತ್ಪಾದನೆ ಮತ್ತು ಗುಣಮಟ್ಟ ಸುಧಾರಿಸಲು ವಿಶೇಷ ನೀತಿ ಪರಿಚಯಿಸಲಾಗುವುದು ಎಂದು ಸೀತಾರಾಮನ್ ಘೋಷಿಸಿದರು.

- Advertisement - 

ದೇಶೀಯ ಉತ್ಪಾದನೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆ ಹೆಚ್ಚಿಸುವ ಉದ್ದೇಶದಿಂದ ಪಾದರಕ್ಷೆ ಮತ್ತು ಚರ್ಮದ ಕ್ಷೇತ್ರಗಳಿಗೆ ಕೇಂದ್ರೀಕೃತ ಯೋಜನೆಯನ್ನು ಜಾರಿಗೆ ತರುವ ಮೂಲಕ ಗುಣಮಟ್ಟದ ಲೆದರ್​ ಮತ್ತು ನಾನ್​ ಪಾದರಕ್ಷೆಗಳ ಉತ್ಪಾದನೆ, ವಿನ್ಯಾಸ ಮತ್ತು ಯಂತ್ರೋಪಕರಣಗಳನ್ನು ಬೆಂಬಲಿಸಲು ಈ ಯೋಜನೆಯು ಉಪಯುಕ್ತವಾಗಿದೆ ಎಂದು ತಿಳಿಸಿದರು.

ಲೆದರ್​ ಸ್ಕೀಮ್​ ಯೋಜನೆಯಿಂದಾಗಿ ದೇಶದಲ್ಲಿ ಹೊಸದಾಗಿ 22 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ. ಜೊತೆಗೆ 4 ಲಕ್ಷ ಕೋಟಿಯಷ್ಟು ವಹಿವಾಟು ಆಗಲಿದ್ದು 1.1 ಲಕ್ಷ ಕೋಟಿಯಷ್ಟು ರಫ್ತು ಸಾಧಿಸಲಿದ್ದೆವೆ ಎಂದು ಸೀತಾರಾಮನ್ ತಿಳಿಸಿದರು.

- Advertisement - 

ಭಾರತ ಆಟಿಕೆಗಳ ಕೇಂದ್ರ:
ಭಾರತವನ್ನು ಆಟಿಕೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇದಕ್ಕಾಗಿ ಯೋಜನೆ ಆರಂಭಿಸಲಾಗುವುದು. ಉತ್ತಮ ಗುಣಮಟ್ಟದ ಪರಿಸರ ಸ್ನೇಹಿ ಆಟಿಕೆಗಳನ್ನು ತಯಾರಿಸುವ ವ್ಯವಸ್ಥೆಯ ಒತ್ತು ನೀಡಲಾಗುವುದು ಎಂದು ಕೇಂದ್ರ ಸಚಿವೆ ತಿಳಿಸಿದರು.

 

Share This Article
error: Content is protected !!
";