ಅಪರಿಚಿತ ಮಹಿಳೆ ಶವ ಪತ್ತೆ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ಕಾರೇಹಳ್ಳಿ ನಟರಾಜು ಅವರ ಜಮೀನಿನ ಪಕ್ಕ ಹರಿಯುವ ಹೇಮಾವತಿ ಚಾನಲ್‌ನಲ್ಲಿ ಸುಮಾರು ೬೦ ವರ್ಷದ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ.

- Advertisement - 

       ಮೃತಳು ೧೫೦ ಸೆಂ.ಮೀ. ಎತ್ತರವಿದ್ದು, ಸುಮಾರು ದಿನಗಳ ಹಿಂದೆ ಮೃತಪಟ್ಟಿರುವ ಕಾರಣ ದೇಹವು ಕೇವಲ ಮೂಳೆಗಳಿಂದ ಕೂಡಿರುತ್ತದೆ. ಮೃತಳ ಮೈ ಮೇಲೆ ಕೆಂಪು ಬಣ್ಣದ ರವಿಕೆ ಹಾಗೂ ಹಸಿರು ಬಣ್ಣ ಸೀರೆ ಇರುತ್ತದೆ.

- Advertisement - 

       ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ವಾ.ಸಂ. ೦೮೧೩೧-೨೨೨೨೨೯, ಮೊ.ಸಂ. ೯೪೮೦೮೦೨೯೫೯-೩೫-೨೧ನ್ನು ಸಂಪರ್ಕಿಸಬಹುದಾಗಿದೆ ಎಂದು ಗುಬ್ಬಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.

- Advertisement - 
Share This Article
error: Content is protected !!
";