ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಗೆ ಹಳ್ಳ ತೋಡಿ ಸಮಾಧಿ ಮಾಡಿದ್ದೇ ಸಿದ್ದರಾಮಯ್ಯ. ಹಲ್ಲು ಕಿತ್ತ ಹಾವಿನಂತಿರುವ ಲೋಕಾಯುಕ್ತವನ್ನು ಭ್ರಷ್ಟ ಕಾಂಗ್ರೆಸ್ಸಿಗರು ಮೈಗೆ ಅಂಟಿಕೊಂಡಿರುವ ಭ್ರಷ್ಟಾಚಾರವನ್ನು ತೊಳೆಯುವ ವಾಷಿಂಗ್‌ಮೆಷಿನ್‌ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಸ್ವಯಂ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನಾಯಕರ ಮೇಲೆ ಭ್ರಷ್ಟಾಚಾರದ ಆರೋಪಗಳು ಬಂದಾಗ, ಕ್ಲೀನ್‌ಚಿಟ್‌ಪಡೆಯಲು ತಮ್ಮ ಕೈಕೆಳಗಿನ ತನಿಖಾ ಸಂಸ್ಥೆಗಳಾದ ಎಸ್‌ಐಟಿ, ಲೋಕಾಯುಕ್ತವನ್ನು ದುರ್ಬಳಕೆ ಮಾಡಿಕೊಳ್ಳುವುದೇ ಅಭ್ಯಾಸವಾಗಿದೆ ಎಂದು ಜೆಡಿಎಸ್ ದೂರಿದೆ.
ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಕಂಡುಬಂದಿರುವ ಲೋಪಗಳು, ಕೆಲ ಪ್ರಕರಣಗಳಲ್ಲಿ ಸಲ್ಲಿಸಿರುವ ಬಿ ರಿಪೋರ್ಟ್‌ಗಳ ಬಗ್ಗೆ ನ್ಯಾಯಾಲಯವೇ ಅಸಮಾಧಾನ ವ್ಯಕ್ತಪಡಿಸಿದೆ.
ತನಿಖಾ ವೈಫಲ್ಯದ ಬಗ್ಗೆ ಕೋರ್ಟ್‌ಛೀಮಾರಿ ಹಾಕಿರುವುದು ರಾಜ್ಯದ ಜನರ ಕಣ್ಣಿಗೆ ಮಣ್ಣೆರೆಚುತ್ತಿರುವ, ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕಳ್ಳಾಟವನ್ನು ಸಾರ್ವಜನಿಕವಾಗಿ ಬೆತ್ತಲು ಮಾಡಿದೆ ಎಂದು ಜೆಡಿಎಸ್ ತೀಕ್ಷ್ಣವಾಗಿ ಹೇಳಿದೆ.

