ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಾಸಕರು, ಸಚಿವರ ಮಕ್ಕಳು ಎಂದು ಬೇರೆ ಕಾನೂನು ಇರುವುದಿಲ್ಲ, ಯಾರೇ ಆಗಲಿ ಕಾನೂನು ಮೀರಿ ನಡೆದರೆ ಶಿಕ್ಷೆ ಆಗಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ಪುತ್ರ ಬಸವೇಶ್ ಭದ್ರಾವತಿಯ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರಿಗೆ ಕೆಟ್ಟ ಪದಗಳನ್ನು ಬಳಸಿ ಬೈದಾಡಿರುವ ಸಂಗತಿ ಕುರಿತು ಅವರು ಪ್ರತಿಕ್ರಿಯಿಸಿ,
ಸುಸಂಸ್ಕೃತ ಕುಟುಂಬ ಯೋಚಿಸಲೂ ಸಾಧ್ಯವಿಲ್ಲದಂಥ ಕೆಟ್ಟ ಪದಗಳನ್ನು ಬಸವೇಶ್ ಮಹಿಳಾ ಅಧಿಕಾರಿಯ ವಿರುದ್ಧ ಬಳಸಿದ್ದಾನೆ. ಅವನು ಬಳಸಿದ ಭಾಷೆ ಮತ್ತು ಅಧಿಕಾರಿಯೊಂದಿಗೆ ನಡೆದುಕೊಂಡಿರುವ ರೀತಿ ಖಂಡನೀಯ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ತಿಳಿಸಿದ್ದಾರೆ.
ಶಾಸಕನ ಮಗನಾಗಲೀ ಆಥವಾ ಮಂತ್ರಿಯ ಮಗ, ಹಾಗೆ ಮಾತಾಡಕೂಡದು, ಬಸವೇಶ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ರಾಜಣ್ಣ ತಾಕೀತು ಮಾಡಿದರು.

