ಅದ್ದೂರಿಯಾಗಿ ಜರುಗಿದ ಶ್ರೀ ಹರಿಹರೇಶ್ವರ ಬ್ರಹ್ಮ ರಥೋತ್ಸವ
ಹರಿಹರ : ಗುಹಾರಣ್ಯ ಕ್ಷೇತ್ರವೊಂದೇ ಪ್ರಸಿದ್ದಿ ಪಡೆದ ಐತಿಹಾಸಿಕ ಸ್ಥಳದಲ್ಲಿ ಬುಧವಾರ ಭರತ ಹುಣ್ಣಿಮೆ ಯಂದು ಶ್ರೀ ಹರಿಹರೇಶ್ವರನ ಬ್ರಹ್ಮರಥೋತ್ಸವವು ಅದ್ದೂರಿಯಾಗಿ ವಿಧಿ ವಿಧಾನಗಳೊಂದಿಗೆ ಜರುಗಿತು.
ಬೆಳಗಿನ ಜಾವದಿಂದಲೆ ಹರಿಹರೇಶ್ವರ ದೇವಸ್ಥಾನ ದಲ್ಲಿ ವಿವಿಧ ಧರ‍್ಮಿಕ ಪೂಜೆಗಳು ನಡೆದು ಶ್ರೀ ಸ್ವಾಮಿಯ ಉತ್ಸವ ಮರ‍್ತಿಯನ್ನು ಪಲ್ಲಕ್ಕಿಯಲ್ಲಿ ಸಕಲ ವಾದ್ಯಗಳಿಂದ ಮೆರವಣಿ ಮೂಲಕ ರಥದ ಬಳಿ ಕರೆ ತರಲಾಯಿತು ನಂತರ ಉತ್ಸವ ಮರ‍್ತಿ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಶುಭ ಮುಹರ‍್ತ ೧೦:೨೫ ನಿಮಿಷಕ್ಕೆ ರಥೋತ್ಸವವನ್ನು ಚಾಲನೆ ಗೊಳಿಸಲಾಯಿತು.
ಚಾಲನೆಗೊಂಡಾಗ ಭಕ್ತರು ಹರಿ ಗೋವಿಂದ, ಹರಿ ಗೋವಿಂದ, ಶ್ರೀ ರಾಮ ರಾಮ ಗೋವಿಂದ, ಹರ ಹರ ಮಹಾದೇವ್, ಹರ ಹರ ಮಹದೇವ್ ಎಂದು ಭಕ್ತಿಯ ಜಯ ಘೋಷಗಳನ್ನು ಕೂಗುತ್ತಾ ಭಾವಕರಾಗಿ ಭಕ್ತ ವೃಂದದವರು ಭಾವ ಪರವಶ ರಾದರು.
ಭಕ್ತರು ರಥೋತ್ಸವ ಚಲಿಸುತ್ತಿರುವ ವೇಳೆಯಲ್ಲಿ ಭಕ್ತರು ತಮ್ಮ ಇಷ್ಟರ‍್ಥಗಳನ್ನು ಮನದಲ್ಲಿ ಬೇಡಿ ಕೊಂಡು ಬಾಳೆಹಣ್ಣು,ಉತ್ತತ್ತಿಗಳನ್ನು ಕಳಸಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸರ‍್ಪಿಸಿ, ತಮ್ಮ ಇಷ್ಟರ‍್ಥಗಳು ಈಡೇರಲಿ ಎಂದುಕೊಳ್ಳುತ್ತಾ ಹರಿಹರನ ಕೃಪೆಗೆ ಪಾತ್ರರಾದರು.
ರಥೋತ್ಸವಕ್ಕೆ ಶಾಸಕ ಬಿ.ಪಿ. ಹರೀಶ್ ರವರು ದೇವಸ್ಥಾನದ ಪುರೋಹಿತರೊಂದಿಗೆ ಶಾಸ್ತ್ರೋಕ್ತ ವಾಗಿ ಚಾಲನೆ ನೀಡಿದರು. ಈ ವೇಳೆ ಶಾಸಕರ ಪುತ್ರ ರ‍್ಜುನ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎನ್.ಎಚ್. ಶ್ರೀನಿವಾಸ್ ನಂದಿ ಗಾವಿ, ನಗರ ಠಾಣೆ ಪಿ. ಐ. ದೇವಾನಂದ ಎಸ್, ದೇವಸ್ಥಾನದ ಆಡಳಿತಾಧಿಕಾರಿ ಆನಂದ್, ಕರ‍್ಯರ‍್ಶಿ ವಾರಿಜ, ಚುನಾಯಿತ ಪ್ರತಿನಿಧಿಗಳು, ರ‍್ವಭಕ್ತ ವೃಂದದವರು ರಥೋತ್ಸವದಲ್ಲಿ ಭಾಗವಹಿಸಿದ್ದರು.

