ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ಆದೇಶ ಈಗ ದೇಶದ ಕರಾವಳಿ ಭದ್ರತೆಗೆ ದೊಡ್ಡ ಗಂಡಾಂತರ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ಬೆಂಗಳೂರು ಕರ್ನಾಟಕ                          ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ಆದೇಶ ಈಗ ದೇಶದ ಕರಾವಳಿ ಭದ್ರತೆಗೆ ದೊಡ್ಡ ಗಂಡಾಂತರ ತಂದೊಡ್ಡಿದೆ ಎಂದು ಜೆಡಿಎಸ್ ಆರೋಪಿಸಿದೆ.

ಸಿದ್ದರಾಮಯ್ಯ ಸರ್ಕಾರ ಕರಾವಳಿ ಕಾವಲು ಪಡೆ ಬಳಸುವ ಬೋಟ್‌ಗಳಿಗೆ ನೀಡುವ ಇಂಧನ ಪ್ರಮಾಣವನ್ನು ಶೇ.50% ಕಡಿತಗೊಳಿಸಿರುವುದು, ಭದ್ರತೆ ದೃಷ್ಟಿಯಿಂದ ಸಮುದ್ರ ಗಸ್ತು ಕಾರ್ಯಾಚರಣೆಗೆ ಭಾರಿ ಹೊಡೆತ ಬಿದ್ದಿದೆ.

- Advertisement - 

ಬೋಟ್​ಗಳಿಗೆ ಮಾಸಿಕ ಪೂರೈಕೆ ಮಾಡುತ್ತಿದ್ದ 600 ಲೀಟರ್‌ ಇಂಧನವನ್ನು, ಕೇವಲ 250 ಲೀಟರ್​ಗೆ ಸೀಮಿತಗೊಳಿಸಿದೆ. ಇದರ ಪರಿಣಾಮ ದಿನಕ್ಕೆ 10 ತಾಸಿನವರೆಗೂ ಗಸ್ತು ತಿರುಗುತ್ತಿದ್ದ ಕಾವಲು ಪಡೆ ಕೇವಲ 1 ಗಂಟೆ ಮಾತ್ರ ಸಮುದ್ರದಲ್ಲಿ ಗಸ್ತು ತಿರುಗಲು ಸಾಧ್ಯ ಎಂದು ಜೆಡಿಎಸ್ ತಿಳಿಸಿದೆ.

ಸರ್ಕಾರದ ಇಂಧನ ಕಡಿತ ಆದೇಶ ಮುಂದೊಂದು ದಿನ ರಾಜ್ಯದ ಭದ್ರತೆಗೂ ಹಾನಿ ಉಂಟುಮಾಡುವುದರಲ್ಲಿ ಅನುಮಾನವೇ ಇಲ್ಲ. ರಾಜ್ಯ ಸರ್ಕಾರ ಭದ್ರತೆಯ ದೃಷ್ಟಿಯಿಂದ ಈ ಎಡವಟ್ಟು ನಿರ್ಧಾರವನ್ನು ಹಿಂಪಡೆಯಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.

- Advertisement - 

Share This Article
error: Content is protected !!
";