ಮೃತ್ಯುಂಜಯಪ್ಪನವರ ಪ್ರೇಮ ಕತೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆ ಕೊತ್ತಲಗಳು
, ಹಾಗು ಐತಿಹಾಸಿಕ ಸ್ಮಾರಕಗಳ ಬಗ್ಗೆ ಸದಾ ತುಡಿಯುವ, ನೆಲದ ಹಿರಿಯ ಮೃತ್ಯುಂಜಯಪ್ಪನವರ ಪ್ರೇಮ ಕತೆಯನ್ನ, ಪ್ರೇಮಿಗಳ ದಿನದಂದು ಪ್ರಕಟಿಸಿ ಅವರ ಪ್ರೇಮ ನಿವೇದನೆಗೆ ಸಾಕ್ಷಿಯಾದ ಪತ್ರಿಕೆಗೆ ಧನ್ಯವಾದಗಳು.

ಲೇಖನದಲ್ಲಿ ಅವರ ಕಿರಿಯ ಗೆಳೆಯರೊಬ್ಬರು, ಅವರಿಗೊಂದು ಅಭಿನಂದನಾ ಗ್ರಂಥವನ್ನೂ ಸಹ ಅರ್ಪಿಸುವ ಬಗ್ಗೆ ಹೇಳಿದ್ದಾರೆ,ಇದು ಆದಷ್ಟು ಬೇಗ ನೆರವೇರಲಿ,ಇಂತಹ ಒಂದು ಸುಂದರ ಕೆಲಸದಲ್ಲಿ ನಮ್ಮೆಲ್ಲರನ್ನೂ ಬಳಸಿಕೊಂಡು,ಅವರ ಬಗ್ಗೆ ಅಭೂತಪೂರ್ವ ಗ್ರಂಥವೊಂದು ಹೊರಬರಲಿ ಎಂಬುದು, ಆ ಗೆಳೆಯನಲ್ಲಿ ನನ್ನದೊಂದು ಖುಷಿಯ ಮನವಿ ಲೇಖನವನ್ನ ಅವಲೋಕಿಸಿದಾಗ, ತ ರಾ ಸು ಅವರ ಬರವಣಿಗೆಯಲ್ಲಿ ರಾಮಾಚಾರಿ

- Advertisement - 

ಹಾಗು ಮಾರ್ಗರೇಟ್ ಪ್ರೀತಿಗೆ ಬಿದ್ದು, ಧರ್ಮ ತ್ಯಜಿಸಿ ಪ್ರೇಮ ಕಟ್ಟಿಕೊಂಡ ಸಾಲುಗಳು ಕಾದಂಬರಿಯಲ್ಲಿ ಕಂಡುಬರುವುದಿಲ್ಲ,ಹಾಗೆಯೇ ಪುಟ್ಟಣ್ಣನವರು ಸಹ ನಾಗರಹಾವು ಸಿನೆಮಾದಲ್ಲಿ ಇಂತಹ ಸಂದರ್ಭವನ್ನು  ಬಹು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ,ಅವರಿಬ್ಬರ ಪ್ರೀತಿಯ ಸಂಗಮ ಹಾಡಿನಲ್ಲಿ ಇಬ್ಬರ ಕೊರಳಲ್ಲಿರುವ” ಶಿಲುಬೆ ಹಾಗು ಆಂಜನೇಯ ತಾಯತ”ವನ್ನ ಒಂದಕ್ಕೊಂದು ಸಂದಿಸುವಂತೆ ಸಮ್ಮಿಲನಗೊಳಿಸಿ,ನಮ್ಮ ನಮ್ಮ ಧರ್ಮಗಳನ್ನು ಆಚರಿಸುತ್ತಲೇ ಪ್ರೀತಿಯಲ್ಲಿ ಬೆಸೆಯೋಣ,

ಬೆರೆಯೋಣ,ಬದುಕ ಬಂಡಿಯ ನೊಗವನ್ನ ಕಟ್ಟಿಕೊಳ್ಳೋಣ, ಅನ್ನುವಂತಹ ಚಿತ್ರಣ ಸಮಾಜಕ್ಕೆ ಪೂರಕವಾದುದಲ್ಲವೇ,ಪ್ರೀತಿಯಲ್ಲಿ ಬೀಳುವ ಯುವ ಜೋಡಿಗಳಿಗೆ ಇದೊಂದು ಅದ್ಬುತ ಸಂದೇಶವೂ ಹೌದು,ಇದು ನಮ್ಮೆಲ್ಲರ ಪರಿಕಲ್ಪನೆಯೂ ಸಹ,ಮುಂದಿನ ತಲೆಮಾರಿಗೂ ಆದರ್ಶವಾಗುವಂತಹ ಸಿನೆಮಾ ನಾಗರಹಾವು ಎಂದರೂ ತಪ್ಪಾಗಲಾರದು,

- Advertisement - 

ಲೇಖನದಲ್ಲಿ ಹೇಳಿಕೊಂಡಿರುವ ಹಾಗೆ, ಮಾತೆಯವರ ಮೂರು ಷರತ್ತುಗಳಲ್ಲಿ, ಮೊದಲನೆಯದು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಬೇಕೆಂಬುದು,ಇದು ಪ್ರೀತಿಯ ದ್ಯೋತಕವೊ ಅಥವಾ ಧರ್ಮದ ದ್ಯೋತಕವೋ ಅರ್ಥ ಕಾಣುತ್ತಿಲ್ಲ,ಇದೇ ನನ್ನನ್ನು ಬಿಡದೆ ಕಾಡುತ್ತಿರುವ ಪ್ರಶ್ನೆಯೂ ಕೂಡ,ಈ ನೆಲದಲ್ಲಿ ಮತಾಂತರ ವಾಗುವವರಿಗೆ ಸರಳ ಕಾನೂನುಗಳಿವೆ, ಜಾತ್ಯಾತೀತ ನೆಲದಲ್ಲಿ ಇವೆಲ್ಲವೂ ಇರಬೇಕೆಂಬುದರ ಬಗ್ಗೆ ನನ್ನ ಸಹಮತವೂ ಇದೆ,

ಹಿಂದೂ/ಕ್ರೈಸ್ತ, ಹಿಂದೂ/ಮುಸ್ಲಿಂ,ಅಥವಾ ಮುಸ್ಲಿಂ/ಕ್ರೈಸ್ತ ಯಾರಾದರೂ ಆಗಲಿ,ಪ್ರೀತಿ ಪ್ರೇಮಗಳ ಜೊತೆ ಜೊತೆಗೆ,ಅವರವರ ಧರ್ಮದೊಂದಿಗೆ ಬದುಕಲೇಕೆ ಈ ಧರ್ಮಗಳು ಬಿಡುವುದಿಲ್ಲ,ಒಂದೇ ಮನೆಯಲ್ಲಿ ಎರಡು ಧರ್ಮಗಳ ಆಚರಣೆ ಮಾಡಬಾರದೆನ್ನುವ ಕಟ್ಟುಪಾಡುಗಳೆನಾದರೂ ಇವೆಯೇ,ನಮ್ಮ ನೆಲದಲ್ಲಿ ಈ ಕಲ್ಪನೆಯ ಪ್ರೀತಿಗಳೇಕೆ ಅರಳುವುದಿಲ್ಲ,ಅಥವಾ ಇಂತಹ ಪ್ರೇಮ ಸಂಬಂಧಗಳ ಮೇಲೆ, ಧರ್ಮಗಳ ಸವಾರಿಗಳೇನಾದರೂ ನಡೆಯುತ್ತಿವೆಯೇ? ಇಂತಹ ಘಟನೆಗಳಿಂದ ಅದೆಷ್ಟೋ ಕುಟುಂಬಗಳು ನಾಶವಾಗಿರುವುದಂತೂ ಸತ್ಯ,ಹೆತ್ತವರ ಬದುಕು ಕೂಡ ಹೈರಾಣಾಗಿ ಹೋಗಿರುವ ಅದೆಷ್ಟೋ ಉದಾಹರಣೆಗಳಿವೆ,

ಜವಾಬ್ದಾರಿ ಹೋರುವಂತಹ ಮಗನೋ,ಮಗಳಿಂದಲೋ ಇಂತಹ ಪ್ರೇಮ ಆಕಸ್ಮಿಕಗಳು ಘಟಿಸಿದಾಗ ಅಂತಹ ಕುಟುಂಬಗಳು ಅನಾಥ ಪ್ರಜ್ಞೆಯಿಂದ ಬೀದಿಗೆ ಬಂದಿರುವ ಸಂದರ್ಭಗಳೂ ಉಂಟು,ಒಮ್ಮುಖವಾಗಿ ನೋಡಿದಾಗ ಎತ್ತರದಲ್ಲಿ ಕಾಣುವ ಜೋಡಿಗಳು,ಅವರ ಕುಟುಂಬಗಳ ಕಡೆ ನೋಡಿದಾಗ ಕನಿಕರಿಸುತ್ತವೆ, ಹೀಗಾಗಬಾರದಿತ್ತು ಅನ್ನುವ ಮೂಕವೇದನೆ ಸಮಾಜದಲ್ಲಿ ಅಂತರ್ಗತಿಸುತ್ತಿರುತ್ತವೆ,ಸದ್ಬಳಕೆಯ ಕಾನೂನುಗಳು ದುರ್ಬಳಕೆಗೆ ದಾರಿ ಕೊಡುತ್ತವೆ,ಇಷ್ಟಾಗಿಯೂ ಪ್ರೇಮಿಗಳ ದಿನಾ ಅಂತ ಪ್ರಕಟಗೊಳ್ಳುವ ಲೇಖನಿಗಳಿಗೆನು ಕಡಿಮೆ ಇರುವುದಿಲ್ಲ,ನರೇಂದ್ರರನ್ನ ಬಯಸಿದ್ದ ಮಾತೆ ನಿವೇದಿತಾ,ತಮ್ಮ ಪ್ರೇಮ ನಿವೇದನೆಯಲ್ಲಿ,ನಿಮ್ಮಿಂದ ನಿಮ್ಮಂತಹ ಒಂದು ಮಗು ಬೇಕು ಎಂದು ಪ್ರೇಮಾಂಕುರಿಸಿ ಕೇಳಿದಾಗ,

ನರೇಂದ್ರರು ಅಷ್ಟೇ ಗೌರವದಿಂದ,ನನ್ನಿಂದ ಒಂದು ಮಗು ಬೇಕು ಅನ್ನುವುದು ನಿಮ್ಮ ಬಯಕೆಯಾಗಿದ್ದರೆ,ನನ್ನನ್ನೇ ನಿಮ್ಮ ಮಗುವಾಗಿ ಸ್ವೀಕರಿಸಿ ಎಂದಿದ್ದರಂತೆ,ಪ್ರೇಮದಲ್ಲಿ ಬೀಳುವ ಜೋಡಿಗಳಿಗೆ ಇಂತಹ ಸಂದೇಶಗಳು ಜೊತೆಗಿರಲಿ,ಪ್ರಭುದ್ದತೆಯ ಬದುಕು ನಿಮ್ಮ ಪ್ರೀತಿಯಲ್ಲಿ ಜೊತೆಯಾದರೆ,ಯಾವ ಕುಟುಂಬಗಳಿಗೂ ನಷ್ಟವಾಗುವುದಿಲ್ಲ, ಮಾಧ್ಯಮ ಮಿತ್ರರಿಂದಲೂ

ಇಂತಹ ವಿಚಾರಗಳಲ್ಲಿ ಎಚ್ಚರಿಕೆಯ ಲೇಖನಗಳು ಬರುವುದು ಒಳಿತು,ಧರ್ಮ ಬಿಟ್ಟ ಪ್ರೇಮಾಚಾರಿಗಳೆಲ್ಲಾ ರಾಮಾಚಾರಿಗಳು ಆಗಬಹುದೆನ್ನುವ ತಪ್ಪು ಸಂದೇಶ ಯುವ ಪೀಳಿಗೆಗೆ ಬರದಿರಲಿ ಎಂಬುದಷ್ಟೇ ನನ್ನ ಅನಿಸಿಕೆ,ಈ ಲೇಖನಕ್ಕೆ ಸಮಯವಹಿಸಿದ್ದು ಸಣ್ಣತನವಾದರೂ,ಇಂತಹವುಗಳನ್ನ ಒಪ್ಪಿಕೊಳ್ಳುವ ಮನಸ್ಸುಗಳೊಂದಿಗೆ ಒಂದು ಸಂವಾದವಿರಲಿ ಎಂಬುದಕಷ್ಟೇ ನನ್ನ ಬರವಣಿಗೆ.       ಲೇಖನ-ಕುಮಾರ್ ಬಡಪ್ಪ

Share This Article
error: Content is protected !!
";