ಫೆ.20ರಿಂದ ವಿದ್ಯುತ್ ಮಾರ್ಗ ಚಾಲನೆ: ವಿದ್ಯುತ್ ಗೋಪುರ ಮುಟ್ಟದಂತೆ ಸೂಚನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಹೊಳಲ್ಕೆರೆ ತಾಲ್ಲೂಕಿನ ಅರಸನಘಟ್ಟ ಗ್ರಾಮದಲ್ಲಿ 2*12.5 ಎಂ.ವಿ. 66/11 ಕೆವಿ ಸಾಮಾರ್ಥ್ಯದ ವಿದ್ಯುತ್ ವಿತರಣಾ ಕೇಂದ್ರ ಹಾಗೂ 66/11 ಕೆವಿ ಅರಸನಘಟ್ಟ ವಿದ್ಯುತ್ ಉಪಕೇಂದ್ರದಿಂದ ಹಾಲಿ ಇರುವ 66 ಕೆವಿ ಹೊಳಲ್ಕೆರೆಚಿಕ್ಕಜಾಜೂರು ವಿದ್ಯುತ್ ಮಾರ್ಗದವರಗೆ 4.135 ಕಿ.ಮೀ ಉದ್ದದ 66 ಕೆವಿ ಲಿಲೋ ಪ್ರಸರಣ ಮಾರ್ಗ ನಿರ್ಮಾಣದ ಕಾಮಗಾರಿಯು ಮುಕ್ತಾಯಗೊಂಡಿರುತ್ತದೆ.

66 ಕೆ.ವಿ.ವಿದ್ಯುತ್ ಮಾರ್ಗವನ್ನು ಇದೇ ಫೆಬ್ರವರಿ 20ರಂದು ಅಥವಾ ತದನಂತರ ಚೇತನಗೊಳಿಸುವುದರಿಂದ 66 ಕೆವಿ ಪ್ರಸರಣ ಮಾರ್ಗದ ವಿದ್ಯುತ್ ಗೋಪುರಗಳನ್ನು ಸಾರ್ವಜನಿಕರು ಮುಟ್ಟುವುದಾಗಲಿ, ಹತ್ತುವುದಾಗಲಿ, ಮರದ ರೆಂಬೆ, ಲೋಹದ ತಂತಿಗಳನ್ನು ಹಾಗೂ ಇತರೆ ಯಾವುದೇ ವಸ್ತುಗಳನ್ನು ಮಾರ್ಗದ ಮೇಲೆ ಎಸೆಯುವುದಾಗಲಿ ಮತ್ತು ವಿದ್ಯುತ್ ಗೋಪುರಗಳಿಗೆ ಜಾನುವಾರುಗಳನ್ನು ಕಟ್ಟುವುದಾಗಲಿ ಮಾಡಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಮಾರ್ಗದ ಮೊಗಸಾಲೆಯಲ್ಲಿ ಅಪಾಯದ ಮಟ್ಟದಲ್ಲಿ ಇರುವ ಮರಗಳನ್ನು ಸುರಕ್ಷತೆಯ ದೃಷ್ಠಿಯಿಂದ ಭೂ ಮಾಲೀಕರು ಕೂಡಲೇ ಮಾರ್ಗದ ಮೊಗಸಾಲೆಯಲ್ಲಿರುವ ಮರಗಳನ್ನು ಕಡಿದು ಹಾಕಲು ಅನುಮತಿ ನೀಡಬೇಕು. ಒಂದು ವೇಳೆ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಮಾರ್ಗದಿಂದ ಸಾರ್ವಜನಿಕರಿಗೆ ಆಗುವ ಹಾನಿ, ತೊಂದರೆ, ಅಪಘಾತಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜವಾಬ್ದಾರಿಯಾಗಿರುವುದಿಲ್ಲ.

ವಿದ್ಯುತ್ ಹಾದುಹೋಗುವ ಪ್ರದೇಶಗಳು:  ಅಪ್ಪರಸನಹಳ್ಳಿ ಮತ್ತು ಅರಸನಘಟ್ಟ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗ ಹಾದು ಹೋಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";