ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಚಿಲ್ಲರೆ ಅಂಗಡಿಗೆ ಬಂದಿದ್ದ ಮುಸುಕು ಧಾರಿಗಳಿಬ್ಬರು, ಚಾಕಲೇಟ್ ಖರೀದಿ ನೆಪದಲ್ಲಿ ವೃದ್ಧೆಯ ಮಾಂಗಲ್ಯ ಸರ ಮತ್ತು ಚಿನ್ನದ ಸರವನ್ನು ಕೊರಳಿ ನಿಂದ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಅರಳು ಮಲ್ಲಿಗೆ ಗ್ರಾಮದಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಅರಳುಮಲ್ಲಿಗೆಯ ಹಾಲಿನ ಡೈರಿ ಸಮೀಪ ಯಶೋಧಮ್ಮ ಎಂಬ 70 ವರ್ಷದ ವೃದ್ಧ ಮಹಿಳೆ ಚಿಲ್ಲರೆ ಅಂಗಡಿಯನ್ನು ಇಟ್ಟು ಕೊಂಡಿದ್ದು,
ಬೈಕ್ ನಲ್ಲಿ ಬಂದಿದ್ದ ಇಬ್ಬರು ಮುಸುಕು ಬಾರಿ ಗಳು, ಚಾಕಲೇಟ್ ಖರೀದಿ ನೆಪದಲ್ಲಿ 10 ರೂಪಾಯಿ ಕೊಟ್ಟು 5 ರೂಪಾಯಿಗೆ ಚಾಕಲೇಟ್ ಖರೀದಿಸಿದ್ದಾರೆ, 5 ರೂಪಾಯಿ ಚಿಲ್ಲರೆ ಕೊಡಲು ವೃದ್ಧೆ ಮುಂದಾದಾಗ. ಆಕೆಯ ಕೊರಳಿನ ನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಕೊಂಡು ಪರಾರಿಯಾಗಿದ್ದಾರೆ.
ಯಶೋಧಮ್ಮ ಕೊರಳಿ ನಿಂದ ಸರವನ್ನು ಕಿತ್ತು ಕೊಳ್ಳುವಾಗ ಸರ ತುಂಡಾಗಿ, ಅರ್ಧ ಸರ ಮಾತ್ರ ಕಳ್ಳರಿಗೆ ಕೈಗೆ ಸಿಕ್ಕಿದೆ, ಇನ್ನುಳಿದ ಅರ್ಧ ಯಶೋಧಮ್ಮ ನವರ ಬಳಿಯೇ ಇದೆ, ಯಶೋಧಮ್ಮ ನವರು ಟಿ ಎ ಪಿ ಎಂ ಸಿ ಅಧ್ಯಕ್ಷ ವೆಂಕಟೇಶ್ ರವರ ತಾಯಿಯಾಗಿದ್ದು ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಸ್ಪೆಕ್ಟರ್ ಸಾಧಿಕ್ ಪಾಷ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.