ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಮಹಿಳೆಯೋರ್ವಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆಕೆಯ ಕಿವಿ ಹಾಗೂ ಕೊರಳಲಿದ್ದ ಒಡೆವೆಗಳನ್ನು ಕಳ್ಳರು ಕಿತ್ತು ಪರಾರಿಯಾಗಿರುವ ಘಟನೆ ತಾಲೂಕಿನ ಶ್ರೀರಾಂಪುರ ಪೋಲಿಸ್ ಠಾಣಾ ವ್ಯಾಪ್ತಿಯ ಹೆಗ್ಗೆರೆ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಸಂಭವಿಸಿದೆ.
ಹಲ್ಲೆಗೊಳಗಾಗಿರುವ ಮಹಿಳೆಯನ್ನು ಹೆಗ್ಗರೆ ಗ್ರಾಮದ ಲೇಟ್ ಮಲ್ಲೇಶಪ್ಪ ಎಂಬುವವರ ಪತ್ನಿ ಅಂಬಿಕಮ್ಮ ಎಂದು ತಿಳಿದು ಬಂದಿದೆ.
ಅಂಬಿಕಮ್ಮ ಅವರು ಗುರುವಾರ ಮಧ್ಯಾಹ್ನ ಹೆಗ್ಗರೆ ಗ್ರಾಮದ ಹೊರವಲಯದಲ್ಲಿರುವ ಅವರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಯಾರೋ ದುಷ್ಕರ್ಮಿ ಆಯುಧದಿಂದ ತಲೆಗೆ ಬಲವಾಗಿ ಒಡೆದು ಆಕೆಯ ಎರಡೂ ಕಿವಿಗಳನ್ನ ಹರಿದು ಕಿವಿಯಲ್ಲಿದ್ದ ೨೦ ಸಾವಿರ ಮೌಲ್ಯದ ಬೆಂಡೋಲೆ, ೫೦ ಸಾವಿರ ಮೌಲ್ಯದ ಬಂಗಾರದ ಚೈನ್ ಪೀಸ್ ಒಟ್ಟು ೭೦ ಸಾವಿರ ಬೆಲೆ ಬಾಳುವ ಒಡೆವೆಗಳನ್ನು ಕಿತ್ತುಕೊಂಡು ಕಳ್ಳ ಪರಾರಿಯಗಿದ್ದಾನೆ.
ಜೋರಾಗಿ ಕಿರುಚಿದ ಶಬ್ದ ಕೇಳಿದಾಗ ಮತ್ತೊಂದು ತೋಟದಲ್ಲಿದ್ದವರು ಬಂದು ನೋಡುವಷ್ಟರಲ್ಲಿ ಕಿರಾತಕ ಪರಾರಿಯಾಗಿದ್ದ ಎನ್ನಲಾಗಿದ್ದು ಮಹಿಳೆಯ ಕಿವಿ ಮತ್ತು ಕುತ್ತಿಗೆಯಲ್ಲಿ ವಿಪರೀತಿ ರಕ್ತಶ್ರಾವವಾಗಿದ್ದು ಹಾಗೂ ಕಣ್ಣಿಗೆ ಬಲವಾಗಿ ಗುದ್ದಿದ್ದಾರೆ ಮಾತನಾಡುವ ಸ್ಧಿತಿಯಲ್ಲಿಲ್ಲದ ಗಾಯಾಳು ಮಹಿಳೆಯನ್ನು ಶ್ರೀರಾಂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ತಿಪಟೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕಟಣ ದಾಖಲಾಗಿದೆ. ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.