ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಸರ್ಕಾರದ ದುರಾಡಳಿತಕ್ಕೆ ಕೊನೆ ಎಂಬುದಿಲ್ಲ. ದಿನನಿತ್ಯವೂ ಸಿದ್ದರಾಮಯ್ಯ ಸರ್ಕಾರ ಮುಷ್ಕರ ಎದುರಿಸುತ್ತಿದೆ. ದಿನಬೆಳಗಾದರೆ ಒಂದೊಂದು ಇಲಾಖೆ ಸರ್ಕಾರದ ವಿರುದ್ಧ ಧರಣಿ ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಇದೀಗ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರ ಸಂಘ ಆಸ್ತಿ ದಸ್ತಾವೇಜು ನೋಂದಣಿ ಸೇರಿದಂತೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ. ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಮುದ್ರಾಂಕ ಶುಲ್ಕವನ್ನು ಹೆಚ್ಚಿಸಿ ಜನರ ಮೇಲೆ ಹೊರೆ ಹೊರಿಸಿದ್ದು ಮಾತ್ರವಲ್ಲದೆ ಮುದ್ರಾಂಕ ಇಲಾಖೆಯ ನೌಕರರ ಮೇಲೆ ಅನಗತ್ಯ ಕಿರುಕುಳ ನೀಡುತ್ತಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರು ಒಂದೊಮ್ಮೆ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದೇ ಆದಲ್ಲಿ ಜನರು ಹೈರಾಣಾಗಲಿದ್ದಾರೆ. ದೂರದೂರುಗಳಿಂದ ಸರ್ಕಾರಿ ಸೇವೆಗಳಿಗೆಂದೇ ಬರುವ ಜನಸಾಮಾನ್ಯರು ಅಡಕತ್ತರಿಗೆ ಸಿಲುಕಲಿದ್ದಾರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಗೆ ಜನಸಮಾನ್ಯರು ಪರಿತಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ದೂರಿದೆ.
ಸಿದ್ದರಾಮಯ್ಯ ಅವರೇ, ಮುದ್ರಾಂಕ ಶುಲ್ಕ ಹೆಚ್ಚಿಸುವ ನಿಮಗೆ ಮುದ್ರಾಂಕ ಇಲಾಖೆಯ ನೌಕರರ ಸಮಸ್ಯೆ ಏಕೆ ಕಾಣಿಸುತ್ತಿಲ್ಲ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

