ಕಾರ್ಖಾನೆಗಳ ಕಲುಷಿತ ನೀರು ತ್ಯಾಜ್ಯ ಕೆರೆಗಳಿಗೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಗಳಿಂದ ಹೊರ ಬೀರುತ್ತಿರುವ
  ರಾಸಾಯಿನಿಕ ತ್ಯಾಜ್ಯ ನೀರು ಕೆರೆಗಳಿಗೆ ಹರಿಯುತ್ತಿರುವುದರಿಂದ ಬಗ್ಗೆ ಅರ್ಕಾವತಿ ನದಿ ಹೋರಾಟ ಸಮಿತಿಯಿಂದ ಮಾಲಿನ್ಯ ನಿಯಂತ್ರಣ ಮಂಡಲಿಗೆ ದೂರು ನೀಡಲಾಗಿದ್ದು ಕಾರ್ಖಾನೆ ಪರಿಶೀಲನೆ ಮಾಡಲಾಯಿತು.

ಅರ್ಕಾವತಿ ನದಿ ಹೋರಾಟ ಸಮಿತಿಯ ಮುಖ್ಯಸ್ಥ ವಸಂತಕುಮಾರ್ ಮಾತನಾಡಿ ಈ ಬಾಗದಲ್ಲಿ ಕಾರ್ಖಾನೆಗಳಿಂದ ವಾಷಿಂಗ್ ಮಾಡಿದ ಕಲುಷಿತ ನೀರನ್ನು ಚರಂಡಿಯ ಮೂಲಕ ಕೆರೆಗೆ ಹರಿಸುವ  ತ್ಯಾಜ್ಯ  ನೀರಿನ ಬಗ್ಗೆ ಪೋಟೋ ವೀಡೀಯೊ ಮಾಡಿ ಮಾಲಿನ್ಯ ನಿಯಂತ್ರಣ ಮಂಡಲಿಗೆ ಸಾಕ್ಷೀ ಸಮೇತ  ದೂರು ನೀಡಲಾಗಿದ್ದು  ಯಾವ ಕಾರ್ಖಾನೆ ಯಿಂದ ಕಲುಷಿತ ನೀರು ಕೆರೆಗೆ ಹರಿಸುತ್ತಿದ್ದಾರೆ ಎಂಬುದು ಅಧಿಕಾರಿಗಳು ಪರಿಶೀಲಿಸಿ ಕಠಿಣ ಕ್ರಮ ಕೈ ಗೊಳ್ಳಲು  ಮನವಿ ಸಲ್ಲಿಸಿ ಲಾಗಿದ್ದು ಕೆರೆಯ ಪಕ್ಕದ ಕೈಗಾರಿಕಾ ಕಾಂಪೌಂಡ್ ಗೋಡೆ ತೆಗೆದು ನೋಡುವಂತೆ ಮನವಿ ಮಾಡಿದರು ಅಧಿಕಾರಿಗಳು ಯಾವುದೆ ರೀತಿಯ ಕ್ರಮ ಕೈ ಗೊಂಡಿಲ್ಲ ಎಂದು ಆರೋಪಿಸಿದರು.

 ಕಾರ್ಖಾನೆ ಗಳಿಂದ ಹೋರ ಬೀಳುತ್ತಿರುವ ರಾಸಾಯಿನಿಕ ತ್ಯಾಜ್ಯದ ಕಲುಷಿತ ನೀರು   ದೊಡ್ಡ ತುಮಕೂರು ಕೆರೆ ಸೇರುತ್ತಿದ್ದು   ಹರಿದು ಬರುತ್ತಿದ್ದು ನೀರಿನಿಂದ ರಾಸಾಯನಿಕ ಅಂಶಗಳು ಹೆಚ್ಚು ಇದ್ದು   ಕುಡಿಯಲು ಬೆಳೆ ಬೆಳೆಯಲು  ಮಾತ್ರವಲ್ಲದೆ ಯಾವುದೇ ರೀತಿಯಲ್ಲೂ ಬಳಕೆ ಮಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿರುವುದು ಎದ್ದು ಕಾಣುತ್ತಿದೆ. ಅರ್ಕಾವತಿ ನದಿ ಹೋರಾಟ ಸಮಿತಿಯ  ಪ್ರಮುಖ ವಕೀಲ ಸತೀಶ್ ತಿಳಿಸಿದರು.

 ಸುಮಾರು 15 ಕೋಟಿ ಹಣ ವೆಚ್ಚ ಮಾಡಿ  ಕಂಪನಿಯ ಒಳಗಡೆ ನೀರನ್ನು ಶುದ್ದ ಮಾಡುವ ಯಂತ್ರವನ್ನು ಅಳವಡಿಸಲಾಗಿದ್ದು  ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಇಲ್ಲಿ ಸುಮಾರು 3000ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು ಅವರನ್ನೆ ನಂಬಿ ಜೀವನ ನಡೆಸುವ   ಪ್ರತ್ಯಕ್ಷ ನೋಡಿದರು ಪ್ರಮಾಣಿಸಿ ನೋಡಿ ಎಂಬ ಮಾತು ಮರೆತು ಯಾರದೋ ಮಾತನ್ನು ಕೇಳಿ ಕಲುಷಿತ ನೀರು ಇಲ್ಲದ ಜಾಗದಲ್ಲಿ ಪೈಪ್  ಕತ್ತರಿಸಿ ಇಂಡಿಗೋ ಬ್ಲೂ ಕಂಪನಿಯ ಮೇಲೆ ಹೊರಿಸಿದ್ದ ಆರೋಪ ನಿರಾಧಾರ ಎಂದು  ಇಂಡಿಗೋ ಬ್ಲೂ ಕಂಪನಿಯ ಉಪಾಧ್ಯಕ್ಷ  ಶ್ರೀನಿವಾಸ್ ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀ  ವಿಧ್ಯಾವಿಭಾ ರಾಥೋಡ್ ಬಾಶೆಟ್ಟಹಳ್ಳಿ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹ ಮೂರ್ತಿ ಮಾಲಿನ್ಯ ನಿಯಂತ್ರಣ ಮಂಡಲಿಯ ಅದಿಕಾರಿಗಳು ಅರ್ಕಾವತಿ ಹೋರಾಟ ಸಮಿತಿಯ ಸದಸ್ಯರು ಕಾರ್ಖಾನೆಯ ಮುಖ್ಯಸ್ಥರು ಹಾಜರಿದ್ದರು.

 

- Advertisement -  - Advertisement - 
Share This Article
error: Content is protected !!
";