ಶ್ರೀಗಂಧ ಮರಗಳ ಕಳ್ಳರ ಬಂಧನ, 7.78 ಲಕ್ಷ ಮೌಲ್ಯದ 311 ಕೆಜಿ ಶ್ರೀಗಂಧ ವಶ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರೈತರ ಜಮೀನುಗಳಲ್ಲಿ ಇತ್ತೀಚೆಗೆ ಶ್ರೀಗಂಧ ಮರಗಳನ್ನು ಕಳವು ಮಾಡಿದ್ದ ಶ್ರೀಗಂಧ ಮರಗಳ ಕಳ್ಳರನ್ನು ಮತ್ತು ಕದ್ದ ಶ್ರೀಗಂಧ ಮರಗಳನ್ನು ಖರೀದಿ ಮಾಡುತ್ತಿದ್ದ ಆರೋಪಿಗಳನ್ನು ಅಬ್ಬಿನಹೊಳೆ ಪೊಲೀಸರು ಬಂಧಿಸಿ ಬಂಧಿತರಿಂದ ಸುಮಾರು 7.78 ಲಕ್ಷ ಮೌಲ್ಯದ 311 ಕೆಜಿ ಶ್ರೀಗಂಧ ವಶ ಪಡಿಸಿಕೊಂಡಿದ್ದಾರೆ.

ಹಿರಿಯೂರು ತಾಲೂಕಿನ ಇಕ್ಕನೂರು ಕುರುಬರಹಳ್ಳಿಯ ವಿ.ರಾಜು ಎನ್ನುವ ರೈತರ ಜಮೀನಿನಲ್ಲಿದ್ದ 12 ಶ್ರೀಗಂಧದ ಮರಗಳು, ಇದೇ ಜಮೀನಿನ ಪಕ್ಕದ ಚಂದ್ರಶೇಖರ್ ಅವರ ಹೊಲದಲ್ಲಿದ್ದ 3 ಶ್ರೀಗಂಧದ ಮರಗಳು ಹಾಗೂ ತಿಮ್ಮಪ್ಪನ ಜಮೀನಿನಲ್ಲಿದ್ದ 3 ಶ್ರೀಗಂಧದ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಸಿ.ಕೆ ಪುರದ ರವಿ ಮುತ್ಯಾಲ, ಮಧುಗಿರಿ ನಗರದ ಮಂಜುನಾಥ್ ಇವರುಗಳನ್ನು ಶ್ರೀಗಂಧದ ಮರಗಳ ಸಮೇತ ಪೊಲೀಸರು ಬಂಧಿಸಿದ್ದರು.

- Advertisement - 

ಈ ಪ್ರಕರಣದಲ್ಲಿ ಕಳ್ಳತನ ಮಾಡಿದ ಶ್ರೀಗಂಧದ ಮರಗಳನ್ನು ಖರೀದಿ ಮಾಡಿದ್ದ ಶಿರಾ ನಗರದ ಅಬ್ದುಲ್ ರೆಹಮಾನ್, ರುಹುಲ್ಲಾ ಎಂಬಾತರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆಂದ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯ ರೊಳ್ಳ ಗ್ರಾಮದಲ್ಲಿರುವ ಶ್ರೀಗಂಧದ ಮರಗಳಿಂದ ಎಣ್ಣೆ ತೆಗೆಯುವ ಕಾರ್ಖಾನೆಗೆ ಮಾರಾಟ ಮಾಡಿದ್ದರು. ಅಲ್ಲಿಂದ ಸುಮಾರು 311 ಕೆಜಿ ಶ್ರೀಗಂಧದ ಮರಗಳ ತುಂಡುಗಳನ್ನು ಪೊಲೀಸರು ವಶ ಪಡಿಸಿಕೊಂಡು ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿ ತನಿಖೆ ಮುಂದುವರೆಸಿದ್ದಾರೆ.

ಅಬ್ಬಿನಹೊಳೆ, ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಶ್ರೀಗಂಧ ಮರಗಳ ಕಳ್ಳತನ ಪ್ರಕರಣದಲ್ಲಿ ಈ ಆರೋಪಿಗಳು ಭಾಗಿಯಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement - 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ಅವರು ಸಿಪಿಐ ಗುಡ್ಡಪ್ಪ, ಅಬ್ಬಿನಹೊಳೆ ಪಿಎಸ್ಐ ಬಾಹುಬಲಿ ಎಂ.ಪಡನಾಡ, ಮಂಜುನಾಥ್ ಜಿ. ಇವರ ನೇತೃತ್ವದಲ್ಲಿ ಶ್ರೀಗಂಧ ಮರಗಳ ಕಳವು ಪ್ರಕರಣ ಪತ್ತೆ ಹಚ್ಚಲು ತಂಡ ರಚನೆ ಮಾಡಿದ್ದು  ಈ ತಂಡವು ಶ್ರೀಗಂಧ ಮರಗಳ ಕಳ್ಳತನದ ಆರೋಪಿಗಳು, ಕದ್ದ ಮರಗಳ ಖರೀದಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೇರಿ ಒಟ್ಟು ನಾಲ್ಕು ಮಂದಿ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸ್ ತಂಡವನ್ನು ಎಸ್ಪಿ ಶ್ಲಾಘಿಸಿದ್ದಾರೆ.

Share This Article
error: Content is protected !!
";