ಒನಕೆ ಓಬವ್ವ ಸವಿ ನೆನಪಿಗಾಗಿ ಅದ್ಧೂರಿ ಗುಡೇಕೋಟೆ ಉತ್ಸವ

News Desk

ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ವಿಜಯ ನಗರ ಜಿಲ್ಲೆ, ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ
 ವಿಜಯನಗರ ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ಸಹಯೋಗದಲ್ಲಿ ಕೋಟೆ ಕೊತ್ತಲಗಳ ನಾಡು, ಪಾಳೆಗಾರರ ನೆಲೆ ಬೀಡು ಓಬವ್ವಳ ತವರೂರಾದ ಗುಡೇಕೋಟೆಯಲ್ಲಿ ನಾಡಿನ ವೀರನಾರಿ ಒನಕೆ ಓಬವ್ವ ಉತ್ಸವವನ್ನು, ಬಹು ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರತಿ ವರ್ಷವೂ ಎರೆಡು ದಿನಗಳ ಕಾಲ ಉತ್ಸವ ಆಚರಿಸಲಾಗುತ್ತಿದ್ದು, ಪ್ರಸ್ತುತ ದ್ವಿತೀಯ ವರ್ಷದ ಒನಕೆ ಓಬವ್ವ ಉತ್ಸವ ಆಚರಿಸಲಾಗುತ್ತಿದೆ. ಮೊದಲ ದಿನದ ಉತ್ಸವ ಬಹು ವಿಜೃಂಭಣೆಯಿಂದ ನೆರವೇರಿತು.

- Advertisement - 

 ಒನಕೆ ಓಬವ್ವ ಭಾವ ಚಿತ್ರವಿರುವ ಹಾಗೂ ಓಬವ್ವಳ ಧಿರೀಸು ತೊಟ್ಟ ಮಕ್ಕಳೊಂದಿಗೆ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ವಿವಿಧ ವಾದ್ಯ ವೃಂದಗಳೊಂದಿಗೆ ಅದ್ಧೂರಿ ಮೆರವಣಿಗೆ ಶ್ರೀರಾಮಲಿಂಗೇಶ್ವರ ದೇವಸ್ಥಾನದಿಂದ ಆರಂಭವಾಯಿತು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ರವರು
, ಪ್ರಮುಖ ಗಣ್ಯರ ಉಪಸ್ಥಿತಿಯೊಂದಿಗೆ ಚಾಲನೆ ನೀಡಿದರು.  ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮದ ವೇದಿಕೆ ನಿರ್ಮಾಣಮಾಡಲಾಗಿತ್ತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ರೇಣುಕಾ, ತಾಲೂಕು ಪಂಚಾಯಿತಿ ಇಓ ನರಸಪ್ಪ, ಗುಡೇಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ಕೃಷ್ಣ, ಜರ್ಮಲಿ ಇಮ್ಮಡಿ ಪಾಳೇಗಾರ ಸಿದ್ದಪ್ಪ ನಾಯಕ ದೊರೆ, ಒನಕೆ ಓಬವ್ವ ವಂಶಸ್ಥರಾದ ರಾಜಣ್ಣ, ಚಲವಾದಿ ಮಹಾಸಭಾ ಕೂಡ್ಲಿಗಿ ಅಧ್ಯಕ್ಷ ಮರಬನಹಳ್ಳಿ ಸಿ.ಮಾರಪ್ಪ, ಕಾನಮಡಗು ಶಶಿಧರ ಸ್ವಾಮಿ, ರಾಮದುರ್ಗ ಪಾಪಣ್ಣ, ಪಾಳೇಗಾರ ರಾಜವಂಶದ ಶಿವರಾಜ್ ವರ್ಮ,

- Advertisement - 

ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಪುರ ವೆಂಕಟೇಶ್, ಕೆಇಬಿ ಗೋವಿಂದಪ್ಪ, ಜೆ.ಎಂ ಬಸಣ್ಣ, ಅಂಚೆ ಇಲಾಖೆ ಅಧಿಕಾರಿ ಚಿದಾನಂದ ಪದ್ಮಶಾಲಿ, ಮುಖಂಡರಾದ ಎನ್ ಟಿ ತಮ್ಮಣ್ಣ, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಗಳ ಮುಖಂಡರು ವೇದಿಕೆಯಲ್ಲಿದ್ದರು.

ಕೂಡ್ಲಿಗಿ ಪಟ್ಟಣದ ನಾಗರಿಕರು ಸೇರಿದಂತೆ, ಗುಡೇಕೋಟೆ ಗ್ರಾಮಸ್ಥರು, ನೆರೆ ಹೊರೆಯ ಗ್ರಾಮಗಳ ಗ್ರಾಮಸ್ಥರು, ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಸಾರ್ವಜನಿಕರು, ಗಣ್ಯರು, ವಿವಿಧ ವಾದ್ಯ ವೃಂದಗಳು, ಕಲಾವಿದರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಒನಕೆ ಓಬವ್ವ ಉತ್ಸವಕ್ಕೆ ಸಾಕ್ಷಿಯಾದರು ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ.

Share This Article
error: Content is protected !!
";